ನವದೆಹಲಿ: ಟ್ರ್ಯಾಕ್ಟರ್‌ಗಳ ಇಂಧನ ಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ನಿಮಯಗಳನ್ನು ರೂಪಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

‘ಕಚ್ಚಾ ತೈಲ ಆಮದು ಭಾರಿ ಪ್ರಮಾಣದಲ್ಲಿ ಏರುತ್ತಿದೆ. ದೇಶದ ಒಟ್ಟು ಡೀಸೆಲ್ ಬಳಕೆ ಪ್ರಮಾಣದಲ್ಲಿ ಟ್ರ್ಯಾಕ್ಟರ್‌ಗಳ ಪಾಲು ಶೇ 7.7ರಷ್ಟು. ಹೀಗಾಗಿ ಡೀಸೆಲ್ ಕ್ಷಮತೆಗೆ ನಿಯಮಗಳನ್ನು ರೂಪಿಸುವುದು ಅನಿವಾರ್ಯ ಎಂದು ಸರ್ಕಾರ ಭಾವಿಸಿದೆ. ಬೇರೆ–ಬೇರೆ ಉದ್ದೇಶಕ್ಕೆ ಬಳಸುವ ಟ್ರ್ಯಾಕ್ಟರ್‌ಗಳಲ್ಲಿ ಡೀಸೆಲ್ ಬಳಕೆ ಪ್ರಮಾಣವನ್ನು ನಿಗದಿ ಮಾಡುವ ಕೆಲಸವನ್ನು ಈ ಸಮಿತಿ ಮಾಡಲಿದೆ. ಆ ಮೂಲಕ ಡೀಸೆಲ್ ಬಳಕೆ ಪ್ರಮಾಣವನ್ನು ತಗ್ಗಿಸಲಾಗುತ್ತದೆ’ ಎಂದು ಸಚಿವಾಲಯದ ಮೂಲಗಳು ಹೇಳಿವೆ.

RELATED ARTICLES  ವೀಣೆ ಆಕಾರದಲ್ಲಿರುತ್ತದೆ ವಿಶ್ವವಿದ್ಯಾನಿಲಯ ಸ್ವಂತ ಕಟ್ಟಡ!

ಸಮಿತಿಯಲ್ಲಿ ಭಾರಿ ಕೈಗಾರಿಕಾ ಸಚಿವಾಲಯದ ಜಂಟಿ ಕಾರ್ಯದರ್ಶಿ, ಇಂಧನ ಕ್ಷಮತೆ ಬ್ಯೂರೊ ಪ್ರಧಾನ ನಿರ್ದೇಶಕ, ಭಾರತೀಯ ಮೋಟಾರು ವಾಹನ ಸಂಶೋಧನಾ ಸಂಸ್ಥೆಯ (ಎಆರ್‌ಎಐ) ನಿರ್ದೇಶಕ ಮತ್ತು ಟ್ರ್ಯಾಕ್ಟರ್‌ ತಯಾರಕರ ಒಕ್ಕೂಟದ ಅಧ್ಯಕ್ಷ ಸೇರಿ ಒಂಬತ್ತು ಸದಸ್ಯರು ಇರಲಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಮಿತಿಯ ಮುಖ್ಯಸ್ಥರಾಗಿರಲಿದ್ದಾರೆ.

RELATED ARTICLES  ಮಕ್ಕಳ ಸಾಹಿತ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲದ ಅಂಗಳದಲ್ಲಿ ಶಿಕ್ಷಕ ಸಾಹಿತಿಗಳ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿ.

ಸಮಿತಿಯು ಮುಂದಿನ ಆರು ತಿಂಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ. 15 ತಿಂಗಳಲ್ಲಿ ಪೂರ್ಣ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ.