ಚೀನಾ, ಇಂಡೋನೇಷಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾ ಫೆಸಿಫಿಕ್ ದೇಶಗಳಂತೆ ಭಾರತೀಯರು ಕಡಿಮೆ ಕ್ಯಾಲ್ಸಿಯಂ ಉಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದು ದಿನಕ್ಕೆ 400 ಮಿಲಿ ಗ್ರಾಂಗಿಂತ ಕಡಿಮೆಯಾಗಿರುತ್ತದೆ. ಇದರಿಂದ ಮೂಳೆ ಮುರಿತ, ಆಸ್ಟಿಯೊಪೊರೋಸಿಸ್ ನಂತಹ ಅಪಾಯಗಳು ಅಧಿಕ ಎಂದು ಜಾಗತಿಕ ಕ್ಯಾಲ್ಸಿಯಂ ಸೂಚಕ ಹೇಳುತ್ತದೆ.

ದಕ್ಷಿಣ ಅಮೆರಿಕಾ, ಉತ್ತರ ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಕೂಡ ಕ್ಯಾಲ್ಸಿಯಂನ್ನು ದಿನಕ್ಕೆ 400ರಿಂದ 500 ಮತ್ತು 500ರಿಂದ 600 ಗ್ರಾಂಗಳಷ್ಟು ಸೇವಿಸುತ್ತಾರೆ.
ಉತ್ತರ ಅಮೆರಿಕಾ ಮತ್ತು ಯುರೋಪ್ ಹೊರಗೆ ಮುಖ್ಯವಾಗಿ ಉತ್ತರ ಯುರೋಪ್ ನಲ್ಲಿ ಕ್ಯಾಲ್ಸಿ.ಯಂ ಸೇವಿಸುವವರ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎತನ್ ಬಾಲ್ಕ್.

RELATED ARTICLES  ಕಾಮನ್‌ವೆಲ್ತ್ ಕೂಟದಲ್ಲಿ ಉತ್ತರಕನ್ನಡದ ಪ್ರತಿಭೆ

ಆಸ್ಟಿಯೊಪೊರೋಸಿಸ್ ಇಂಟರ್ ನ್ಯಾಷನಲ್ ಪತ್ರಿಕೆಯಲ್ಲಿ ಈ ಸಂಶೋಧನೆ ಪ್ರಕಟಗೊಂಡಿದೆ. ಸುಮಾರು 74 ದೇಶಗಳ ವಯಸ್ಕರನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ದಿನಕ್ಕೆ 400 ಗ್ರಾಂಗಳಿಗಿಂತಲೂ ಕಡಿಮೆ ಕ್ಯಾಲ್ಸಿಯಂ ಸೇವಿಸುತ್ತಾರೆ. ಉತ್ತರ ಯುರೋಪ್ ರಾಷ್ಟ್ರಗಳಲ್ಲಿ ಮಾತ್ರ ಜನರು ದಿನಕ್ಕೆ 1,000 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸುತ್ತಾರೆ ಎಂದು ತಿಳಿದುಬಂದಿದೆ.

RELATED ARTICLES  ಬೈಕ್ ಗೆ ಡಿಕ್ಕಿಹೊಡೆದ ಕಾರು : ಗಂಭೀರ ಪೆಟ್ಟು

ಜನರಲ್ಲಿ ಕ್ಯಾಲ್ಸಿಯಂ ಸೇವನೆಯ ಪ್ರಮಾಣ ಸೇವನೆ ಹೆಚ್ಚಳಕ್ಕೆ ಈ ಅಧ್ಯಯನ ಪ್ರೇರಣೆ ನೀಡಲಿದೆ ಎಂದು ಸಂಶೋಧಕ ಬಲ್ಕ್ ಹೇಳುತ್ತಾರೆ.