ಹೊನ್ನಾವರ ಚಂದಾವಾರದ ನಾಕಾ ಸಮೀಪ, ಪ್ರಸಿದ್ಧ ಹನುಮಂತ ದೇವರ ದ್ವಾರದ ಸನಿಹವೇ ಕೃತಕ ಮಸೀದಿ ಮಾದರಿಯನ್ನ ನಿರ್ಮಿಸಲು ಮುಂದಾದ ಪರಿಣಾಮ ಎರಡು ಕೋಮುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಕಲ್ಲುತೂರಾಟ ನಡೆದ ಘಟನೆ ಕುಮಟಾ ತಾಲೂಕಿನ ಚಂದಾವರದಲ್ಲಿ ನಡೆದಿದೆ. ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಧ್ಯಾಹ್ನದ ವೇಳೆ ಯಾರೋ ಕಿಡಿಗೇಡಿಗಳು ಏಕಾಏಕಿ ಪೊಲೀಸರತ್ತ ಕಲ್ಲುತೂರಿದ್ದಾರೆ.. ಹೀಗಾಗಿ ಪೊಲೀಸರು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದರು ಎನ್ನಲಾಗಿದೆ. ಈ ವೇಳೆ ಹಿಂದು ಸಂಘಟನೆಯ ಮುಖಂಡರಾದ ಸೂರಜ್ ನಾಯ್ಕ ಸೋನಿ ಸೇರಿದಂತೆ 50 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂಥ ಗಲಾಟೆಯಿಂದ ಚಂದಾವರದಲ್ಲಿ ಸಹೋದರತ್ವದ ಭಾವನೆ ದೂರವಾಗಿ, ದ್ವೇಷದ ಕಿಡಿ ಹೊತ್ತಿಕೊಂಡಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ದಿನಕರ ಶೆಟ್ಟಿ,ನಾಗರಾಜ ನಾಯಕ ತೊರ್ಕೆ,ಸೂರಜ್ ನಾಯ್ಕ ಸೋನಿ, ಭಾಸ್ಕರ ನಾಯ್ಕ ಇನ್ನಿತರರು ಹಾಜರಿದ್ದರು.