ಹೊನ್ನಾವರ : ತಾಲೂಕಿನ ಚಂದಾವರ ಇಂದು ಸಂಪೂರ್ಣ ಭಯದ ನೆಲೆಯಾಗಿ ಪರಿವರ್ತನೆಯಾಗಿತ್ತು, ಹಿಂದೆಲ್ಲ ಸೌರ್ದತೆಯಿಂದ ಬದುಕಿದ ಊರು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಹೌದು ಚಂದವಾರದಲ್ಲಿ ಕೆಲವು ದಿನಗಳಿಂದ ಸಣ್ಣದಾಗಿ ಹಬ್ಬಿದ ಎರಡು ಗುಂಪುಗಳ ಹೊಗೆ ಇಂದು ಕುಮಟಾ ಹೊನ್ನಾವರವನ್ನು ಸುಡುವಷ್ಟು ದೊಡ್ಡದಾಗಿತ್ತು. ಯಾರೋ ಕಿಡಿಗೇಡಿಗಳ ದುಷ್ಕøತ್ಯದಿಂದಾಗಿ ಚಂದಾವರದಲ್ಲಿ ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಿದರು.

ಮುಸ್ಲಿಮರ ಪವಿತ್ರ ಹಬ್ಬವಾದ ಈದ್, ಮಿಲಾದ್, ಹಬ್ಬದ ತಯಾರಿ ಅದ್ದೂರಿಯಾಗಿ ಶುರುವಾಗಿದೆ. ಇದರಿಂದ ಮುಸಲ್ಮಾನ ಸಮಾಜದ ಬಾಂಧವರಿದಲ್ಲಿ ಎಲ್ಲಾ ಕಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಅದೆ ರೀತಿ ಹೊನ್ನಾವರ ತಾಲೂಕಿನ ಚಂದಾವರದಲ್ಲಿಯು ಈ ಹಬ್ಬಕ್ಕೆ ಪೂರ್ವ ತಯಾರಿ ಭರದಿಂದ ನಡೆದಿತ್ತು ಆದರೆ ಹೊನ್ನಾವರದಲ್ಲಿ ಈ ಸಂಬಂಧ ಎರಡುಕೋಮುಗಳ ನಡುವಿನ ಸೌಹಾರ್ದತೆ ಕದಡಿದೆ.

RELATED ARTICLES  ಸ್ನಾನದ ಕೋಣೆಯಲ್ಲಿ ಅವಿತು ಕುಳಿತಿದ್ದ ಜವರಾಯ..! ಶಾಕ್ ಹೊಡೆದು ಸಾವು ಕಂಡ ವಿದ್ಯಾರ್ಥಿ.

IMG 20171201 WA0002

ಚಂದಾವಾರದ ನಾಕಾ ಸಮೀಪ, ಪ್ರಸಿದ್ಧ ಹನುಮಂತ ದೇವರ ದ್ವಾರದ ಸನಿಹವೇ ಕೃತಕ ಮಸೀದಿ ಮಾದರಿ ನಿರ್ಮಾಣದ ಎರಡು ಗುಂಪುಗಳ ಗಲಾಟೆ ತಾರಕಕ್ಕೆ ಏರಿತ್ತು. ಯಾರೋ ಕಿಡಿಗೇಡಿಗಳು ಕಲ್ಲು ಎಸೆದು ಸಮಸ್ಯೆ ಉಲ್ಬಣಗೊಳಿಸುವಂತೆ ಮಾಡಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಸುಮಾರು ನೂರಕ್ಕೂ ಹೆಚ್ಚು ಜನರ ಮೇಲೆ ಲಾಠಿ ಪ್ರಹಾರ ನಡೆಸಿದರು. ಈ ಲಾಠಿ ಪ್ರಹಾರದಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ, ಇದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದ ಹಿಂದು ಸಂಘಟನೆಯ ಮುಖಂಡರಾದ ಸೂರಜ್ ನಾಯ್ಕ ಸೋನಿ, ಬಾಸ್ಕರ ನಾಯ್ಕ ಸೇರಿದಂತೆ 50 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

IMG 20171201 WA0006

ಚಂದಾವರದಲ್ಲಿ ಉದ್ವಿಗ್ನ ವಾತವರಣ ಉಂಟಾದ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ರು, ಮತ್ತು ಘಟನೆಯ ಬಗ್ಗೆ ತಿಳಿದ ಅವರು ಬಂದಿತರನ್ನು ಬಿಡುಗಡೆಗೊಳಿಸುವ ಮಾತು ಇಲ್ಲ ಎಂದರು. ಆದರೆ ಮಾಜಿ ಶಾಸಕರಾದ ದಿನಕರ ಶೆಟ್ಟಿ ವಿರೋಧಿಸಲು ಮುಂದಾದ್ರು ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮತ್ತು ದಿನಕರ ಶೆಟ್ಟಿ ಮಧ್ಯೆ ಮಾತಿನ ಚಕಮಕಿ ನಡೆಯಿತು, ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ ಹಾಜರಿದ್ದರು.

RELATED ARTICLES  ಕಡಮೆ ಶ್ರೀ ಬೀರ ದೇವರ ವರ್ಧಂತಿ ಇಂದು.

ಕೊನೆಯಲ್ಲಿ ಬಂದಿತ ಹಿಂದೂ ಕಾರ್ಯಕರ್ತರನ್ನು ಜಿಲ್ಲಾ ಕಾರಗೃಹಕ್ಕೆ ಕೊಂಡಯ್ಯುವ ಅನುಮಾನ ವೈಕ್ತವಾಗಿದೆ. ಬಂಧಿತರಿಂದ ಮೊಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಹಿಂದೂ ಕಾರ್ಯಕರ್ತರ ಬಂದನ ಸುದ್ದಿ ತಿಳಿಯುತ್ತಿದ್ದಂತೆ ಕುಮಟಾ ಗಿಬ್ ಸರ್ಕಲನಲ್ಲಿ ಇನ್ನಷ್ಟು ಕಾರ್ಯಕರ್ತರು ಜಮಾಗೊಂಡು ಬಂದಿತರನ್ನು ಬಿಡುಗಡೆ ಗೊಳಿಸಲೇಬೇಕು ಎಂದು ಪ್ರತಿಭಟಿಸಿದ್ರು.

ಒಟ್ಟಾರೆ ಚಂದಾವರ ಎನ್ನುವುದು ಸಂಪೂರ್ಣ ಬೂದಿ ಮುಚ್ಚಿದ ಕೆಂಡವಾಗಿದ್ದು ಖಾಕಿ ಪಡೆಗಳ ಸರ್ಪಗಾವಲಿನಲ್ಲಿದೆ.ಪರಿಸ್ಥಿತಿ ತಿಳಿಯಾಗಿ ಶಾಂತಿ ಸೌಹಾರ್ಧತೆ ಬೆಳೆಯಲಿ ಎಂಬುದು ಸುತ್ತಲಿನ ಜನತೆಯ ಆಶಯವಾಗಿದೆ.