ರಾ.ಹೆ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ

 

ಕಾರವಾರ: ರಾಷ್ಟ್ರೀಯ ಹೆದ್ದಾರಿ ೬೬ ರ ಚತುಷ್ಪಥ ಕಾಮಗಾರಿಯಲ್ಲಿ ಬಲಿಯಾಗಲಿದ್ದ ನೂರಾರು ಗಿಡ ಮರಗಳನ್ನು ಬುಡ ಸಮೇತ ಕಿತ್ತು ಕಾರವಾರದ ರವೀಂದ್ರನಾಥ ಕಡಲ ತೀರದಲ್ಲಿ ನಡುವ ಮೂಲಕ ಬಲಿಯಾಗಲಿರುವ ಗಿಡ ಮರಗಳಿಗೆ ಮರುಜೀವ ನೀಡಿದಂತಾಗಿದೆ.

ಕಾರವಾರ ವಲಯ ಅರಣ್ಯಾಧಿಕಾರಿ ಗಣಪತಿ ಅವರ ನಿರ್ದೇಶನದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಅನೇಕ ಕಾಡು ಬದಾಮಿ ಮರಗಳನ್ನು ಬುಡಸಮೇತ ಕಿತ್ತು ಕಡಲ ತೀರದಲ್ಲಿ ನೆಡಲಾಯಿತು.

RELATED ARTICLES  ಚಿರತೆ ದಾಳಿ ಯುವಕನಿಗೆ ಗಾಯ : ಅಂಕೋಲಾದಲ್ಲಿ ಘಟನೆ

“ರಾಷ್ಟ್ರೀಯ ಹೆದ್ದಾರಿ ೬೬ ರ ಚತುಷ್ಪಥ ಕಾಮಗಾರಿಯಲ್ಲಿ ಬಲಿಯಾಗಲಿರುವ ನೂರಾರು ಗಿಡ ಮರಗಳ ರಕ್ಷಣೆಯಲ್ಲಿ ಇದು ನಮ್ಮ ಇಲಾಖೆಯ ಮೊದಲ ಪ್ರಯತ್ನವಾಗಿದ್ದು ಈ ಪ್ರಯೋಗ ಯಶಸ್ವಿ ಆದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಕೆಲಸ ಮಾಡಲಾಗುವದು” ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಗಣಪತಿ ಅವರು ಹೇಳಿದರು.

RELATED ARTICLES  ವಿಸ್ತಾರ ಕಾಯಕ ಯೋಗಿ ಪ್ರಶಸ್ತಿಗೆ ಆರ್ .ಕೆ. ಬಾಲಚಂದ್ರ ಆಯ್ಕೆ

ಒಟ್ಟಾರೆ ಅರಣ್ಯ ಇಲಾಖೆಯ ಈ ಕಾರ್ಯ ಯಶಸ್ವಿ ಯಾಗಿದ್ದೇ ಆದಲ್ಲಿ ಪರಿಸರ ರಕ್ಷಣೆಯ ಜೊತೆಗೆ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ನೆರಳಿನ ಸೌಕರ್ಯವು ಸಿಗಲಿದೆ. ಅರಣ್ಯ ಇಲಾಖೆಯ ಈ ಕಾರ್ಯ ಪರಿಸರ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.