ಹೊಸ ಹೆರವಟ್ಟಾ ಫೋಸ್ಟ ಆಫೀಸಿನ ಹಿಂದುಗಡೆ ಇರುವ ನೂರು ಮೀಟರ್‌ ರಸ್ತೆ ಸಿಮೆಂಟ್ ರಸ್ತೆ ಅಗುವ ಕನಸು ನನಸಾಗಿಯೇ ಉಳಿದಿದೆ. ಸ್ಥಳಿಯರು ಎಷ್ಟೋ ಸಲ ಪ್ರಯತ್ನಿಸಿದರೂ ಚಪ್ಪಲಿ ಸವೆದಿದ್ದೆ ಬಂತು.. ಮಾಡಿಸುತ್ತೇವೆ ಅನ್ನುವ ಆಶ್ವಾಸನೆ ಕೇಳಲು ಇಂಪಾಗಿರುತ್ತದೆಯೇ ಹೊರತು ಮುಂದಿನ ಚುನಾವಣೆಯ ತನಕ ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ನೋವಿನ ಮಾತು. ಚರಂಡಿಯ ವ್ಯವಸ್ಥೆಯೂ ಕೂಡ ಇಲ್ಲಾ. ಮಳೆಗಾಲದ ಒಳಗೆ ರಸ್ತೆ, ಚರಂಡಿ ನಿರ್ಮಾಣ ಸಮರೋಪಾಯದಲ್ಲಿ ಸಾಗದಿದ್ದರೆ ರಸ್ತೆಯ ನೀರು ಕುಡಿಯುವ ನೀರಿನ ಬಾವಿಗೆ ‌ನುಗ್ಗುವುದರ ಜೊತೆ ರಸ್ತೆ ಎನ್ನುವುದು ” ಸ್ವಿಮಿಂಗ್ ಫೂಲ್ ” ಆಗುವುದು ಶತಸಿದ್ದ.. ಇನ್ನಾದರೂ ಎಚ್ಚೆತ್ತು ಕೊಳ್ಳುವರೇ ಪುರಸಭೆ ಹಾಗೂ ಪುರಸಭಾ ವಾರ್ಡಿನ ಪ್ರತಿನಿಧಿಗಳು?  ಎಂದು ಸ್ಥಳೀಯ ನಿವಾಸಿಗಳು ತಮ್ನ ಅಳಲನ್ನು ತೋಡಿಕೊಂಡಿದ್ದಾರೆ..ಹಾಗೂ ಕೂಡಲೆ ಶಾಸಕರು ಮಧ್ಯ ಪ್ರವೇಶಿಸಿ ಸಂಬಂಧಪಟ್ಟ ಇಲಾಖೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶಿಸಿ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

RELATED ARTICLES  ಸೂರಜ ನಾಯ್ಕ ಸೋನಿ ಅವರ ಹುಟ್ಟು ಹಬ್ಬ ನಿಮಿತ್ತ ಕುಮಟಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ