ತಾಂಡವ ಕಲಾನಿಕೇತನ ಬೆಂಗಳೂರು ಹಾಗೂ ಕುಮಟಾ ವೈಭವ ಸಮಿತಿ ಆಶ್ರಯದಲ್ಲಿ ತಾಲೂಕಿನ ಮಣಕಿ ಮೈದಾನದಲ್ಲಿ ಹಮ್ಮಿಕೊಂಡ ಅದ್ಧೂರಿಯಾದ ಕುಮಟಾ ವೈಭವ ಕಾರ್ಯಕ್ರಮವು ದಿನಾಂಕ 29/11/17 ರಂದು ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರಿಂದ ಉದ್ಘಾಟನೆಗೊಂಡಿದ್ದು ಎರಡನೇ ದಿನದ ಕಾರ್ಯಕ್ರಮವನ್ನು 30/11/17 ರಂದು ತಾಲೂಕಾ ಯುವ ಸಂಯುಕ್ತ ಸಂಘದ ಅಧ್ಯಕ್ಷರಾದ ಸೂರಜ ನಾಯ್ಕ ಸೋನಿಯವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕುಮಟಾ ವೈಭವ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದೆ. ತಮ್ಮ ಬೆಳಕು ಟ್ರಸ್ಟ್ ಮೂಲಕ ಎಲ್ಲೆಡೆ ಬೆಳಕು ಬೀರುತ್ತಿರುವ ಸಾಮಾಜಿಕ ಸೇವಾ ಮನೋಭಾವನೆಯುಳ್ಳ ನಾಗರಾಜ ನಾಯಕ ತೊರ್ಕೆ ಅವರು ನಮ್ಮ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕುಮಟಾ ವೈಭವ ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿ ತಾಂಡವ ಕಲಾನಿಕೇತನ ಸಂಸ್ಥೆಯ ಜೊತೆ ಕೈ ಜೋಡಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ಪಕ್ಷಭೇದ ಮರೆತು ತನು, ಮನ, ಧನ ಸಹಕಾರ ನೀಡಬೇಕು ಎಂದರು.
ಕುಮಟಾ ವೈಭವ ಸಮಿತಿಯ ಗೌರವಾಧ್ಯಕ್ಷತೆ ವಹಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ನಮ್ಮ ನಾಡು ವಿವಿಧ ಸಂಸ್ಕøತಿಯ ನೆಲೆವೀಡು. ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕøತಿಯ ಬಗ್ಗೆ ನಾವೆಲ್ಲ ಹೆಮ್ಮೆ ಪಡುವಂತಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಮೂಲ ಸಂಸ್ಕøತಿ, ಆಚಾರ-ವಿಚಾರಗಳನ್ನು ಮರೆಯುತ್ತಿರುವುದು ವಿಷಾದನೀಯ. ನಮ್ಮ ಸ್ಥಳೀಯ ಕಲೆಗಳನ್ನು ಉಳಿಸಿ ಬೆಳೆಸಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆಯನ್ನೊದಗಿಸಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೈಭವವು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಾಗಿರದೆ ರಕ್ತ ತಪಾಸಣೆ, ಕಾನೂನು ಸಲಹಾ ಮೇಳ, ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ ತಿಳುವಳಿಕಾ ಮೇಳ ಸೇರಿದಂತೆ ಹಲವು ಮೇಳಗಳನ್ನು ಆಯೋಜಿಸಲಾಗಿದೆ. ಕಲಾ ಕ್ಷೇತ್ರಗಳಲ್ಲಿ ನಿಃಸ್ವಾರ್ಥವಾಗಿ ಸೇವೆ ಸಲ್ಲಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿದ್ದೇವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಲ್ಲಿ ನಮ್ಮ ಸ್ಥಳೀಯ ಕಲೆಗಳು, ಕಲಾವಿದರು ಉಳಿಯಲು ಬೆಳೆಯಲು ಸಾಧ್ಯ ಎಂದರು.
ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಕಲಾವಿದರಿಂದ ಸಮಕಾಲೀನ ನೃತ್ಯ, ಬಿಗ್ ಬಾಸ್ ಖ್ಯಾತಿಯ ರವಿ ಮುರೂರು, ಪುಟ್ಟಗೌರಿ ತಂಡದಿಂದ ವಿಶೇಷ ನೃತ್ಯಗಳು ಮುಂತಾದ ಮನರಂಜನಾ ಕಾರ್ಯಕ್ರಮಗಳು ಭಾರೀ ಜನಸ್ತೋಮದನಡುವೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಮನಾಥ ಶಾನಭಾಗ ಅವರು ಮಾತನಾಡುತ್ತಾ ಕುಮಟಾ ವೈಭವಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೈಭವ ಸಮಿತಿಯ ಅಧ್ಯಕ್ಷರಾದ ಡಾ|| ಜಿ.ಜಿ. ಹೆಗಡೆ, ಜಿ. ಪಂ. ಸದಸ್ಯೆ ವೀಣಾ ಸೂರಜ ಸೋನಿ, ಲೀಲಾವತಿ ನಾಗೇಶ ಭಂಡಾರಿ, ಮೋಹಿನಿ ಗೌಡ, ಅಶ್ವಿನ್ ನಾಯ್ಕ, ಹರೀಶ ನಾಯ್ಕ, ಸಿ. ಜಿ. ಹೆಗಡೆ, ನರಸಿಂಹ ಭಟ್ಟ, ಕಡತೋಕ, ಮಂಜು ಜೈನ, ಗಣೇಶ ನಾಯ್ಕ, ಮಹೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES  ಆದರ್ಶ ಶಿಕ್ಷಕ ಹೊನ್ನಪ್ಪ ನಾಯಕರ ಸೇವಾ ನಿವೃತ್ತಿ