ಕುಮಟಾ: ಜನತೆಗೆ ಮುದ ನೀಡುತ್ತಿರುವ ಕುಮಟಾ ವೈಭವ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ತಾಂಡವ ಕಲಾಕೇತನ ಹಾಗೂ ಉತ್ಸವ ಸಮಿತಿ ಕುಮಟಾ ಇವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ ಸದಸ್ಯರಾದ ಪ್ರದೀಪ ನಾಯ್ಕ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಮ್ಮ ದೇಶವು ಏಕತೆಯನ್ನು ಹೊಂದಿದ್ದ ಒಂದು ಅದ್ಬುತ್ ದೇಶವಾಗಿದೆ. ಮತ್ತು ನಮ್ಮ ದೇಶವು ಹತ್ತಾರು ಧರ್ಮಗಳು, ನೂರಾರು ಬಾಷೆಗಳು ಹಾಗೂ ಸಾವಿರಾರು ಜಾತಿಗಳು ಮತ್ತು ಎಷ್ಟು ಬಗೆಯ ಕಲೆ, ಸಾಂಪ್ರದಾಯಕ ಹಾಗೂ ಸಂಸ್ಕ್ರತಿಕಗಳು ಎಲ್ಲವನ್ನು ಮೇಲೆ ಎತ್ತಿಹಿಡಿದುಕೊಂಡಿದೆ. ಮತ್ತು ನಮ್ಮ ದೇಶವು ಜಗತ್ತಿನಲ್ಲಿ ಅದ್ಬುತ ದೇಶವಾಗಿದೆ ಎಂದರು.
ನಂತರ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಮಾತನಾಡಿ, ನಮ್ಮ ದೇಶದ ಸಂಸ್ಕ್ರತಿಯನ್ನು ಇಡೀ ಜಗತ್ತಿನಲ್ಲಿ ಹೆಮ್ಮಯಿಂದ ಶಾಘ್ಲಿಸುತ್ತಿದ್ದಾರೆ. ಮತ್ತು ನಮ್ಮ ದೇಶವು ಜಗತ್ತಿನಲ್ಲಿ ಆಚಾರ,ವಿಚಾರ,ಸಂಸ್ಕ್ರತಿ ಮತ್ತು ವೈದ್ಯಕೀಯ ಪದ್ದತಿಯನ್ನು ಹೆಮ್ಮಯಿಂದ ನೋಡುತ್ತಿರುವುದು ದೃಷ್ಟಿ ಭಾರತದಕಡೆಗಿದೆ ಎಂದರು. ಆದರೆ ಇವತ್ತು ನಮ್ಮ ದೇಶದಲ್ಲಿ ಸೌಲಭ್ಯಗಳು ಮತ್ತು ಸಾಧನೆಗಳು ಹೆಚ್ಚಾದಂತೆ ಸೌಲಭ್ಯದ್ದ ಕೂರತೆಗಳು ಹೆಚ್ಚಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಳಕು ಗ್ರಾಮೀಣ ಅಭಿವೃದ್ದಿಯ ಟ್ರಸ್ಟ ಹಾಗೂ ಕುಮಟಾ ವೈಭವ ಉತ್ಸವ ಸಮೀತಿಯ ಗೌರವಾಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಜರಿದ್ದ ಅವರು ಈ ಸಂದರ್ಭದಲ್ಲಿ ಮಾತನಾಡಿ ಕುಮಟಾ ಉತ್ಸವದ ಅಭೂತ ಯಶಸ್ಸಿಗೆ ಜನತೆಯ ಸಹಕಾರವೇ ಕಾರಣ ಎಂದರು.
ತಾಂಡವ ಕಲಾಕೇತನ ಸಂಯೋಜಕರಾದ ಮಂಜುನಾಥ ನಾಯ್ಕ, ಅಶ್ವಿನ್ ನಾಯ್ಕ, ಮಹೇಶ ನಾಯ್ಕ, ಹರೀಶ ನಾಯ್ಕ, ಹಾಗೂ ಮುಂತಾದವರು ಉಪಸ್ಥಿತಿಯಿದ್ದರು. ನಂತರ ಝಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಿಂದ ಕಾಮಿಡಿ ಶೋ ನಡೆಯಿತು.