ಶಿರಸಿ: ಇತ್ತೀಚೆಗೆ ಕಾಡಾನೆಗಳ ದಂಡೊಂದು ತಾಲೂಕಿನ ಹಲವು ಗ್ರಾಮಗಳ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ಇದರಿಂದಾಗಿ ಕಂಗಾಲಾದ ರೈತರು ಬೆಳೆ ಪರಿಹಾರಕ್ಕೆ ಆಗ್ರಹಿಸಿದರು.

ಈ ವೇಳೆ ರೈತರ ಪರವಾಗಿ ಸುದ್ದಿಗಾರರೊಂದಿಗೆ ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಮಾತನಾಡಿ, ತಾಲೂಕಿನ ಬೆಡಸಗಾಂವ್, ಕುರ್ಲಿ, ತೊಗರಳ್ಳಿ, ಕರಕಲಜಡ್ಡಿ, ಅಟಬೈಲ ಹಳ್ಳಿಗಳಲ್ಲಿ 14 ಆನೆಗಳ ಹಿಂಡು ರೈತರ ತೋಟ ಗದ್ದೆಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡಿದೆ. ಈ ವೇಳೆ ರೈತರು ತಮ್ಮ ತೋಟ ಗದ್ದೆಗಳಲ್ಲಿ ಆಗಿರುವ ಬೆಳೆಹಾನಿ ತೋರಿಸಿ ಪರಿಹಾರಕ್ಕಾಗಿ ಒತ್ತಾಯಿಸಿದರು. ಆನೆ ಕಂದಕ ನಿರ್ಮಾಣ ಮಾಡಿ ಈ ಹಳ್ಳಿಗಳ ತೋಟ ಗದ್ದೆ ರಕ್ಷಿಸಲು ಅಗತ್ಯ ಯೋಜನೆ ಜಾರಿ ಮಾಡಲು ಅನಂತ ಹೆಗಡೆ ಅಶೀಸರ ಅವರು ಅರಣ್ಯ ಇಲಾಖೆಗೆ ಸಲಹೆ ನೀಡಿದರು.

RELATED ARTICLES  ನಮ್ಮ ಹೃದಯವೇ ರಾಮಮಂದಿರ; ರಾಘವೇಶ್ವರ ಶ್ರೀ

ಅಪಾರ ಹಾನಿಗೆ ಒಳಗಾದ ಕರಕಲಜಡ್ಡಿಯ ತುಕಾರಾಂ ನಾಯ್ಕ, ವಿರೂಪಾಕ್ಷ, ಮಹಾಬಲೇಶ್ವರ ಹೆಗಡೆ ಅವರ ಗದ್ದೆ ತೋಟಗಳಲ್ಲಿ ಅಡಿಕೆ, ತೆಂಗು, ಬಾಳೆ, ಭತ್ತದ ಗೊಣಬೆ ನಾಶವಾಗಿದ್ದನ್ನು ಪ್ರತ್ಯಕ್ಷ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾತೂರು ವಲಯ ಅಧಿಕಾರಿ ಮಹೇಶ ಕೆ. ಮಾತನಾಡಿ, ಬೆಳೆಹಾನಿ ಪರಿಹಾರ ಶೀಘ್ರವೇ ವಿತರಿಸುವ ಭರವಸೆ ನೀಡಿದರು.

RELATED ARTICLES  ಸಿನಿಮೀಯ ರೀತಿಯಲ್ಲಿ ಪಾರಾದ 80 ವರ್ಷದ ವೃದ್ಧೆ.

ಈ ವೇಳೆ ತೊಗರಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿ.ಆರ್. ಹೆಗಡೆ, ಡಾ. ಕೇಶವ ಹೆಚ್ ಕೊರ್ಸೆ, ಗಣಪತಿ ಕೆ. ಬಿಸಲಕೊಪ್ಪ, ಮಾರುತಿ, ಆಗೇರ ಮುಂತಾದವರಿದ್ದರು.