ಮಹಾತ್ಮಾ ಗಾಂಧಿ ಪ್ರೌಢಶಾಲೆ: ಸಂಸ್ಥಾಪನಾ ದಿನಾಚರಣೆ;
ಕುಮಟಾ: ಇಲ್ಲಿಯ ಕೆನರಾ ಎಜ್ಯುಕೇಶನ್ ಸೊಸೈಟಿಯ ಚಿತ್ರಿಗಿ ಪ್ರೌಢಶಾಲೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಗುರುಸ್ತುತಿ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. 1966 ಇಸ್ವಿಯ ಜೂನ್ 3 ನೆ ತಾರೀಕಿನಂದು, 54 ವಿದ್ಯಾರ್ಥಿಗಳಿಂದ ಪ್ರಥಮ ಮುಖ್ಯಾಧ್ಯಾಪಕ ವಿ.ಆರ್.ಕಾಮತ ಮತ್ತು ಶಿಕ್ಷಕ ಎಸ್.ಎಂ.ಭಟ್ಟರಿಂದ ಪ್ರಾರಂಭವಾದ ಚಿತ್ರಿಗಿ ಹೈಸ್ಕೂಲ್ ಅಂದಿನ ಶಿಕ್ಷಣಾಭಿಮಾನಿ ನಾಗಪ್ಪ ಯಶ್ವಂತ ಶಾನಭಾಗ, ರಾಯಾ ಸುಬ್ಬಾ ಬಾಳ್ಗಿ, ರಾಮಾ ಲಕ್ಕುಮನೆ, ಸರ್ವೋತ್ತಮ ಉಪೇಂದ್ರ ಪ್ರಭು, ಜಿ.ಎನ್.ಭಟ್ಟ ಮೊದಲಾದವರು ಸೇರಿ, ಚಿತ್ರಿಗಿ ಹೈಸ್ಕೂಲ್ ಕಮಿಟಿ ರಚಿಸಿಕೊಂಡಿದ್ದರು. ತದನಂತರ ಕೆನರಾ ಎಜ್ಯುಕೇಶನ್ ಸೊಸೈಟಿಯ ಎಲ್.ಚ್.ಪ್ರಭು, ಡಾ.ಬಿ.ಎಂ.ಪೈ, ಎನ್.ಕೆ.ಪೈ, ವಿ.ಎಂ.ಶಾನಭಾಗ ಬುರ್ಡೇಕರ ನೇತೃತ್ವದಲ್ಲಿ ಹೈಸ್ಕೂಲ್ ಸ್ಥಾಪನೆಗೊಂಡು ಇಂದು ರಾಜ್ಯದಲ್ಲಿಯೇ ಹೆಸರುವಾಸಿಯಾದ ವಿದ್ಯಾಲಯದ ಇತಿಹಾಸವನ್ನು ಶಿಕ್ಷಕ ಕಿರಣ ಪ್ರಭು ನೀಡಿದರು.
ಗುರುಸ್ತುತಿಯನ್ನು ಹಿರಿಯ ಶಿಕ್ಷಕ ವಿ.ಎನ್.ಭಟ್ಟ ಮಾಡಿ, ಗುರುವಿಲ್ಲದ ಗುರಿಯಿಲ್ಲದ ಜೀವನ ಚುಕ್ಕಾಣಿಯಿಲ್ಲದಹಡಗಿನಂತೆ ನಶ್ವರ ಎಂದು ಉದಾಹರಿಸಿ ಗುರುಗುಣಗಾನ ನೆರವೇರಿಸಿದರು.
ಶಾಲಾಭಿಮಾನಿ, ಉದ್ಯಮಿ ಮೋಹನ ಶಾನಭಾಗ ಮಾತನಾಡಿ, ಮುಂಬರುವ ದಿನಗಳಲ್ಲಿ ಆಡಳಿತ ಮಂಡಳಿ ಅನುಮತಿ ಹಾಗೂ ಸಾರ್ವಜನಿಕ ಸಹಕಾರದೊಂದಿಗೆ ಈ ಶಾಲೆಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ದೊರಕಿಸುವಂತೆ ಪ್ರಯತ್ನಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ತಮ್ಮ ತಾಯಿ ಲಕ್ಷ್ಮೀಬಾಯಿ ನಾಗಪ್ಪ ಶಾನಭಾಗ ಅವರ ಹೆಸರಿನಲ್ಲಿ ಐದು ವಿದ್ಯಾರ್ಥಿಗಳಿಗೆ ಸಂಪೂರ್ಣ ಕಲಿಕಾ ವೆಚ್ಚವನ್ನು ಭರಿಸಲು ಧನಸಹಾಯ ನೀಡಿದರು.
ವಿಶ್ರಾಂತ ಮುಖ್ಯಾಧ್ಯಾಪಕ ಮುರಲೀ ಮಾಸ್ತರ್ ಶಾಲಾ ಉನ್ನತಿಗಾಗಿ ಶ್ರಮಿಸುತ್ತಿರುವ ಶಿಕ್ಷಕ ವರ್ಗವನ್ನು ಉಲ್ಲೇಖಿಸಿ ಪ್ರಶಂಸಿಸಿದರು. ರಾಜ್ಯದಲ್ಲಿಯೇ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವುದು ಗಮನಾರ್ಹ ಸಂಗತಿಯೆಂದು ಪ್ರಸ್ತಾವಿಸಿದರು.
ಹಿರಿಯ ಸಾಹಿತಿ ಬಿ.ಪಿ.ಶಿವಾನಂದ ರಾವ್ ಮಾತನಾಡುತ್ತಾ ವಿದ್ಯಾರ್ಥಿಗಳು ಅಂತರ್‍ಜಾಲ ಮತ್ತು ಮೊಬೈಲ್ ಪ್ರಪಂಚದಲ್ಲಿ ಮುಳುಗಿದ್ದು, ಓದುವ ಪ್ರವೃತ್ತಿಯಿಂದ ದೂರ ಸರಿಯುತ್ತಿರುವುದು ಶೋಚನೀಯ ವಿಚಾರ ಎಂದರು. ಶಾಲಾ ಪಠ್ಯದ ಜತೆಗೆ ಇತರ ಸಾಹಿತ್ಯಿಕ ಪುಸ್ತಕಗಳ ಅಧ್ಯಯನವೂ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಆಡಳಿತ ಮಂಡಳಿಯ ಸಂಪೂರ್ಣ ತೊಡಗಿಸಿಕೊಳ್ಳುವಿಕೆಯಿಂದ ಮಾತ್ರ ಶಾಲೆ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ ಎಂದರಲ್ಲದೇ, ತಮ್ಮ ಸಹೋದ್ಯೋಗಿಗಳಿಗೆ ವಿಶೇಷವಾಗಿ ಅಭಿನಂದಿಸಿದರು. ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವಿನಾಯಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಾಳ್ಕೆ ಪ್ರಾಯೋಜಿತ ವಿದ್ಯಾರ್ಥಿವೇತನ: ಕಳೆದ ಮೂರು ವರ್ಷಗಳಿಂದ ಸತತವಾಗಿ ರೋಟೇರಿಯನ್ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ನೀಡುತ್ತಾ ಬಂದಿರುವ ವಿದ್ಯಾರ್ಥಿ ವೇತನ ತಲಾ ಐದು ಸಾವಿರ ರೂ. ಗಳನ್ನು ಈ ವರ್ಷ ಕುಮಾರಿಯರಾದ ದಿವ್ಯಾ ಸುರೇಶ ನಾಯ್ಕ, ಶ್ರೀಲಕ್ಷ್ಮೀ ಹೆಗಡೆ, ರುಕ್ಸಾರ್ ಬಾನು ಸಾಬ್, ಮಾಲಾ ಹನುಮಂತ ಪಟಗಾರ ಹಾಗೂ ಸಾನಿಯಾ ಬಾಷಾ ಅವರು ಪಡೆದರು.
ಪ್ರಾರಂಭದಲ್ಲಿ ಮಾಲಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿ, ಪರೀಕ್ಷಾ ಫಲಿತಾಂಶವನ್ನು ವಿಶ್ಲೇಷಿಸಿದರು. ಶಿಕ್ಷಕಿ ಸ್ವಾತಿ ನಾಯ್ಕ ನಿರೂಪಿಸಿದರೆ, ಶಿಕ್ಷಕ ಸುರೇಶ ಪೈ ವಂದಿಸಿದರು.

RELATED ARTICLES  ಗೋಫಲ ಟ್ರಸ್ಟ್ ವತಿಯಿಂದ ಗೋಶಾಲೆಗಳಿಗೆ16.85 ಲಕ್ಷ ರೂಪಾಯಿ ದೇಣಿಗೆ

ಸುಬ್ರಾಯ ವಾಳ್ಕೆ ಪ್ರಾಯೋಜಿತ ವಿದ್ಯಾರ್ಥಿವೇತನವನ್ನು ಕುಮಾರಿಯರಾದ ದಿವ್ಯಾ ಸುರೇಶ ನಾಯ್ಕ, ಶ್ರೀಲಕ್ಷ್ಮೀ ಹೆಗಡೆ, ರುಕ್ಸಾರ್ ಬಾನು ಸಾಬ್, ಮಾಲಾ ಹನುಮಂತ ಪಟಗಾರ ಹಾಗೂ ಸಾನಿಯಾ ಬಾಷಾ ಅವರು ಪಡೆದರು. ಶಿಕ್ಷಕ ಲಕ್ಷಣ ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಾಹಿತಿ ಬಿ.ಪಿ.ಶಿವಾನಂದ ರಾವ್, ಉದ್ಯಮಿ ಮೋಹನ ಶಾನಭಾಗ, ಮುರಲೀ ಮಾಸ್ತರ್ ವೇದಿಕೆಯಲ್ಲಿದ್ದರು.

RELATED ARTICLES  ಬೇಸಿಗೆ ರಜಾ ಶಿಬಿರ ಪ್ರಾರಂಭ

ಸಾಹಿತಿ ಬಿ.ಪಿಶಿವಾನಂದ ರಾವ್ ಮಾತನಾಡಿದರು. ಶಿಕ್ಷಕ ಲಕ್ಷಣ ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಉದ್ಯಮಿ ಮೋಹನ ಶಾನಭಾಗ, ಮುರಲೀ ಮಾಸ್ತರ್ ವೇದಿಕೆಯಲ್ಲಿದ್ದರು.

ಉದ್ಯಮಿ ಮೋಹನ ಶಾನಭಾಗ ಮಾತನಾಡಿದರು. ಶಿಕ್ಷಕ ಲಕ್ಷಣ ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಾಹಿತಿ ಬಿ.ಪಿ.ಶಿವಾನಂದ ರಾವ್, ಮುರಲೀ ಮಾಸ್ತರ್ ವೇದಿಕೆಯಲ್ಲಿದ್ದರು.

ಲಕ್ಷ್ಮೀಬಾಯಿ ಶಾನಭಾಗ ಧನಸಹಾಯವನ್ನು ಪಡೆದ ವಿದ್ಯಾರ್ಥಿಗಳು. ಶಿಕ್ಷಕ ಲಕ್ಷಣ ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಾಹಿತಿ ಬಿ.ಪಿ.ಶಿವಾನಂದ ರಾವ್, ಉದ್ಯಮಿ ಮೋಹನ ಶಾನಭಾಗ, ಮುರಲೀ ಮಾಸ್ತರ್ ವೇದಿಕೆಯಲ್ಲಿದ್ದರು.

ಎಸ್ಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿನಾಯಕ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಲಕ್ಷಣ ಅಂಬಿಗ, ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಾಹಿತಿ ಬಿ.ಪಿ.ಶಿವಾನಂದ ರಾವ್, ಉದ್ಯಮಿ ಮೋಹನ ಶಾನಭಾಗ, ಮುರಲೀ ಮಾಸ್ತರ್ ವೇದಿಕೆಯಲ್ಲಿದ್ದರು.