ಜಪಾನ್‌ ಒಂದು ಸುಂದರವಾದ ದೇಶವಾಗಿದೆ. ಇಲ್ಲಿ ಒಂದು ಹಳೆಯ ದ್ವೀಪವಿದೆ. ಅಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಓಕಿನೊಮಿಶೊ ಹೆಸರಿನ ಈ ಐಲ್ಯಾಂಡ್‌ 240 ಎಕರೆ ಪ್ರದೇಶದಲ್ಲಿ ಹರಡಿದೆ. ಈ ದ್ವೀಪದಲ್ಲಿ ಸಮುದ್ರ ದೇವಿಯ ಒಂದು ಮಂದಿರವಿದೆ. ಈ ಮಂದಿರದ ಇತಿಹಾಸ 2000 ವರ್ಷ ಹಳೆಯದಾಗಿದೆ. ಈ ಮಂದಿರದಲ್ಲಿ ಒಬ್ಬ ಪೂಜಾರಿ ಇದ್ದಾರೆ, ಪೂರ್ತಿ ಐಲ್ಯಾಂಡ್‌ನಲ್ಲಿ ಅವರು ಮಾತ್ರ ವಾಸಿಸುತ್ತಾರೆ.


ಇಲ್ಲಿ ಮಹಿಳೆಯರಿಗೆ ಯಾಕೆ ಪ್ರವೇಶವಿಲ್ಲ?

ಈ ಮಂದಿರದ ಪಂಡಿತರು ಹೇಳುವಂತೆ ನಾಲ್ಕರಿಂದ ಒಂಭತ್ತನೆ ಶತಮಾನದವರೆಗೆ ಇಲ್ಲಿ ಕೊರಿಯನ್‌ ಮತ್ತು ಚೀನಾದ ನಡುವೆ ವ್ಯಾಪಾರ ನಡೆಯುತ್ತಿತ್ತು. ಆ ಸಮಯದಿಂದ ಇಲ್ಲಿ ಹಡುಗುಗಳಿಗೆ ಪೂಜೆ ಮಾಡಲಾಗುತ್ತಿತ್ತು.

RELATED ARTICLES  ಹೊತ್ತಿ ಉರಿದ ರಾಸಾಯನಿಕ ತುಂಬಿದ ಲಾರಿ.

ಮಂದಿರದ ಹಳೆಯ ಪರಂಪರೆಯ ಅನುಸಾರ ಮಹಿಳೆಯರ ಸುರಕ್ಷತೆಗಾಗಿ ಇಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದೆ ಪರಂಪರೆ ಮುಂದುವರೆದು ಇಂದಿಗೂ ಸಹ ಈ ದ್ವೀಪಕ್ಕೆ ಯಾವುದೆ ಮಹಿಳೆಯರಿಗೆ ಪ್ರವೇಶವಿಲ್ಲ.

ಈ ಮಂದಿರಕ್ಕೆ ವರ್ಷದಲ್ಲಿ ಒಂದು ಬಾರಿ ಅಂದರೆ 27 ಮೇಯಂದು ಮಾತ್ರ ಪ್ರವೇಶ ಮಾಡಲು ಅವಕಾಶವಿದೆ. ಆದರೆ ಆ ಸಮಯದಲ್ಲಿ ಕೇವಲ ಪುರುಷರು ಮಾತ್ರ ಪ್ರವೇಶ ಮಾಡಬಹುದು. ಅವರು ಸಹ ಮಂದಿರಕ್ಕೆ ಪ್ರವೇಶ ಮಾಡುವ ಮುನ್ನ ಶುದ್ಧವಾಗಬೇಕು. ಇದಕ್ಕಾಗಿ ಅವರು ಸಮುದ್ರ ಸ್ನಾನ ಮಾಡಿ ಬರಬೇಕು.

RELATED ARTICLES  ರಾಷ್ಟ್ರೀಯ ಕ್ರೀಡಾ ದಿನದಂದು ಕ್ರೀಡಾ ಸಾಧಕರಿಗೆ ಸನ್ಮಾನ.

ಇಲ್ಲಿನ ಪಂಡಿತರ ಪ್ರಕಾರ 1904 -05 ರಲ್ಲಿ ರಷ್ಯಾದ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರ ಹಡಗು ಇಲ್ಲಿ ಮುಳುಗಿ, ಹಲವಾರು ಸೈನಿಕರು ಸಾವನ್ನಪ್ಪಿದ್ದರು. ಇವರ ನೆನಪು ಮತ್ತು ಗೌರವಕ್ಕಾಗಿ ಈ ಮಂದಿರಲ್ಲಿ ಮೇ 27ರಂದು ಸಮಾರಂಭವನ್ನು ಆಯೋಜಿಸಲಾಗುತ್ತದೆ.