ಬೆಂಗಳೂರು: ಮೆಡಿಕಲ್ ಲ್ಯಾಬ್ ಹಾಗೂ ವೈದ್ಯರ ಒಳಒಪ್ಪಂದ ಜಾಲವನ್ನು ಪತ್ತೆ ಮಾಡಿರುವ ಆದಾಯ ತೆರಿಗೆ ಇಲಾಖೆ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿದ್ದುದ್ದನ್ನು ಬಹಿರಂಗಪಡಿಸಿದೆ.

ವಿವಿಧ ಪರೀಕ್ಷೆಗಳಿಗೆ ಸಮ್ಬಂಧಿಸಿದಂತೆ ಡಯಾಗ್ನೆಸ್ಟಿಕ್ ಸೆಂಟರ್ ಗಳಿಗೆ ರೋಗಿಗಳನ್ನು ಕಳಿಸುವ ವೈದ್ಯರಿಗೆ ಕಮಿಷನ್ ರೂಪದಲ್ಲಿ ಮೆಡಿಕಲ್ ಲ್ಯಾಬ್ ಗಳು ಒಪ್ಪಂದದ ಪ್ರಕಾರ ಹಣ ಸಂದಾಯವಾಗುತ್ತಿದ್ದ ಹಗರಣವನ್ನು ಪತ್ತೆ ಮಾಡಿದ್ದು ಐಟಿ ಇಲಾಖೆ. ಈ ಮೂಲಕ ವೈದ್ಯರು ಹೇಗೆ ಕೋಟ್ಯಂತರ ರೂಪಾಯಿಯಷ್ಟು ಹಣ ಗಳಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದೆ.

ಕಳೆದ 3 ದಿನಗಳಿಂದ 5 ಡಯಾಗ್ನೆಸ್ಟಿಕ್ ಸೆಂಟರ್ ಹಾಗು 2 ಐವಿಎಫ್ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದ್ದು, ಎಂಆರ್ ಐ ಟೆಸ್ಟ್ ಗಳಿಗೆ ಶಿಫಾರಸು ಮಾಡುವುದಕ್ಕೆ ಶೇ.35 ರಷ್ಟು ಕಮಿಷನ್, ಸಿಟಿ ಸ್ಕ್ಯಾನ್ ಗಳು ಹಾಗೂ ಇನ್ನಿತರ ಲ್ಯಾಬ್ ಟೆಸ್ಟ್ ಗಳಿಗೆ ಶಿಫಾರಸು ಮಾಡುವುದಕ್ಕೆ ಶೇ.20 ರಷ್ಟು ಕಮಿಷನ್ ನ್ನು ವೈದ್ಯರಿಗೆ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

RELATED ARTICLES  ದಿನಾಂಕ 16/07/2019 ರ ದಿನ ಭವಿಷ್ಯ ಇಲ್ಲಿದೆ

ಐಟಿ ದಾಳಿಯ ವೇಳೆ ಸುಮಾರು 1.4 ಕೋಟಿ ರೂಪಾಯಿ, 3.5 ಚಿನ್ನಾಭರಣಗಳು, ಬೃಹತ್ ಪ್ರಮಾಣದ ವಿದೇಶಿ ವಿನಿಮಯ ಹಣ, ಕೋಟ್ಯಂತರ ರೂಪಾಯಿ ಜಮಾವಣೆಯಾಗಿದ್ದ ಗೌಪ್ಯ ವಿದೇಶಿ ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ವೈದ್ಯರು ಹಾಗೂ ಮೆಡಿಕಲ್ ಲ್ಯಾಬ್ ಗಳ ನಡುವೆ ಇದ್ದ ಒಳಒಪ್ಪಂದದ ಬಗ್ಗೆ ಮಾಹಿತಿ ನೀಡಿರುವ ಐಟಿ ಇಲಾಖೆ, ಮಾರ್ಕೆಟಿಂಗ್ ಖರ್ಚುಗಳ ಸೋಗಿನಲ್ಲಿ ಮೆಡಿಕಲ್ ಸೆಂಟರ್ ಗಳು ವಹಿವಾಟು ಮಾಡುತ್ತಿದ್ದವು ಎಂದು ತಿಳಿಸಿದೆ.

15 ದಿನಕ್ಕೊಮ್ಮೆ ಅಥವಾ ಆಡ್ವಾನ್ಸ್ ಕ್ಯಾಶ್ ಪೇಮೆಂಟ್ ಗಳ ರೂಪದಲ್ಲಿ ಹಣವನ್ನು ವೈದ್ಯರಿಗೆ ತಲುಪಿಸಲಾಗುತ್ತಿತ್ತು, ಚೆಕ್ ಮೂಲಕ ಪಾವತಿಸಲಾಗುತ್ತಿದ್ದ ಹಣವನ್ನು ಪ್ರೊಫೆಷನಲ್ ಶುಲ್ಕ ಎಂದು ನಮೂದಿಸಲಾಗುತ್ತಿತ್ತು, ಅಷ್ಟೇ ಅಲ್ಲದೇ ತಪಾಸೆಣೆಗೆ ಬಂದಿದ್ದ ರೋರಿಗೆ ಮಾಡಲಾದ ಪರೀಕ್ಷೆ, ಅದಕ್ಕೆ ವಿಧಿಸಲಾಗಿದ್ದ ಬಿಲ್ ಹಾಗೂ ಕಮಿಷನ್ ಮೊತ್ತವನ್ನು ಕಮಿಷನ್ ಏಜೆಂಟ್ ಗಳ ಮೂಲಕ ವೈದ್ಯರಿಗೆ ತಲುಪಿಸಲಾಗುತ್ತಿತ್ತು ಎಂದು ತಿಳಿದುವಂದಿದೆ. ಮೆಡಿಕಲ್ ಸೆಂಟರ್ ಗಳಿಗೆ ಭೇಟಿಯೇ ನೀಡದಿದ್ದರೂ ಸಹ ವೈದ್ಯರುಗಳಿಗೆ ಇನ್-ಹೌಸ್ ಕನ್ಸಲ್ಟೆಂಟ್ ಎಂದು ನಮೂದಿಸಿ ಹಣ ಪಾವತಿ ಮಾಡಲಾಗುತ್ತಿದ್ದದ್ದೂ ಸಹ ಐಟಿ ದಾಳಿಯ ವೇಳೆ ಬಹಿರಂಗವಾಗಿದೆ. ಈಗ ದಾಳಿ ನಡೆಸಲಾಗಿರುವ ಲ್ಯಾಬ್ ಗಳು 100 ಕೋಟಿಗೂ ಹೆಚ್ಚು ಮೊತ್ತದ ಆದಾಯವನ್ನು ಹೊಂದಿದ್ದವು.

RELATED ARTICLES  ಗೋವುಗಳ ಅಕ್ರಮ ಸಾಗಾಟ ತಡೆಯುವಂತೆ ಶಿವಮೊಗ್ಗ ಭಾರತೀಯ ಗೋ ಪರಿವಾರದಿಂದ ಮನವಿ.