ಲಾಹೋರ್: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಜಮಾತ್-ಉದ್-ದವಾದ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿನ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲಿದ್ದಾನೆ.

ಮುಂದಿನ ವರ್ಷ ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಹಫೀಜ್ ಸಯೀದ್ ಸ್ವತಃ ಹೇಳಿಕೆ ನೀಡಿದ್ದು, ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಮೂಲಕ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾನೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತನೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

RELATED ARTICLES  ಭಾರತ್ ಬಂದ್ ಇದ್ದರೂ..ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ದಾಖಲೆ ಏರಿಕೆ !

ರಾಜಕೀಯ ಪ್ರವೇಶದ ಉದ್ದೇಶ ಹೊಂದಿದ್ದ ಹಫೀಜ್ ಸಯೀದ್ ನ ಜೆಯುಡಿ ಉಗ್ರ ಸಂಘಟನೆ ಆಗಸ್ಟ್ ತಿಂಗಳಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷವನ್ನು ಸ್ಥಾಪಿಸಿತ್ತು. ಈ ವರ್ಷ ಜನವರಿಯಲ್ಲಿ ಬಂಧನಕ್ಕೊಳಗಾಗಿದ್ದ ಭಯೋತ್ಪಾದಕ ಹಫೀಜ್ ಸಯೀದ್, ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ.

RELATED ARTICLES  ಚಿದಂಬರಂ ಕ್ರೀಡಾಂಗಣದಲ್ಲಿ ಅಬ್ಬರಿಸಿದ್ದ ಪಾಂಡ್ಯ ತೊಟ್ಟಿದ್ದು ಮುಂಬೈ ಇಂಡಿಯನ್ಸ್ ಗ್ಲೌಸ್