ಶಾಸಕ ವೈದ್ಯರಿಂದ ಕರಾವಳಿ ಉತ್ಸವದ ಉದ್ಘಾಟನೆ
ಹೊನ್ನಾವರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವವನ್ನು ಶಾಸಕ ಮಂಕಾಲು ವೈದ್ಯರವರು ಉದ್ಘಾಟಿಸಿದರು. ನಮ್ಮ ಜಿಲ್ಲೆಯ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕರಾವಳಿ ಉತ್ಸವದ ಉದ್ದೇಶವೂ ಕೂಡ ಇದೆ ಆಗಿದೆ. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಕ್ಕಳ ಕವಿ ಗೋಷ್ಠಿ ಆಯೋಜಿಸಲಾಗಿತ್ತು ಅದರಲ್ಲಿ ಮಕ್ಕಳು ಉತ್ತಮ ಕವಿತೆ ರಚಿಸಿ ಪ್ರಸ್ತುತ ಪಡಿಸಿದ್ದಾರೆ. ಮಕ್ಕಳ ಪ್ರತಿಭೆ ಹೊರ ತರುವ ಉತ್ತಮ ವೇದಿಕೆ ಎಂದು ಶಾಸಕ ಮಂಕಾಳೂ ವೈದ್ಯ ಹೇಳಿದರು. ಈ ಸಂದರ್ಭದಲ್ಲಿ ಶಾಸಕಿ ಶಾರದಾ ಶೆಟ್ಟಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಉಪವಿಭಾಗಾಧಿಕಾರಿ ಎಮ್.ಎನ್. ಮಂಜುನಾಥ್ ತಹಶೀಲ್ದಾರ್ ವೀ.ಅರ್.ಗೌಡ, ಜಯಶ್ರೀ ಮೋಗೆರ್ ಉಪಸ್ಥಿತರಿದ್ದರು.
ಕರಾವಳಿ ಉತ್ಸವಕ್ಕೆ ಅತಿಥಿಗಳನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು. #ಹೊನ್ನಾವರದ ಶರಾವತಿ ಸರ್ಕಲ್ ನಿಂದ ಸಂತ ಆಂಥೋನಿ ಮೈದಾನದವರೆ ಅತಿಥಿಗಳನ್ನು ವಾದ್ಯಗಳೊಂದಿಗೆ ಕರೆತರಲಾಯಿತು. ಮರಕಾಲು, ಸುಗ್ಗಿ ಕುಣಿತ ಹಾಗೂ ಮಹಿಳೆಯರ ಡೋಲು ತಂಡಗಳು ಮೆರವಣಗೆಯಲ್ಲಿ ಪಾಲ್ಗೊಂಡಿದ್ದವು.

RELATED ARTICLES  ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚೆಕ್ ಹಸ್ತಾಂತರಿಸಿದ ದಿನಕರ ಶೆಟ್ಟಿ