ಕುಮಟಾ: ಐದು ದಿನಗಳ ಕಾಲ ಮನೊರಂಜನೆಯ ಜೊತೆಗೆ ಮನೊಲ್ಲಾಸ ನೀಡಿದ ಕುಮಟಾ ವೈಭವ ಅಂತಿಮ ದಿನ ಅದ್ಧೂರಿ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿದೆ. ಈ ಮೂಲಕ ಯಶಸ್ವಿ ಐದು ದಿನಗಳ ಕಾಲ ವೈಭವಪೂರಿತವಾಗಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕುಮಟಾ ವೈಭವ ಕುಮಟಾ ಜನತೆಯ ಮನಗೆದ್ದಿದೆ.

ಕುಮಟಾದ ಮಣಕಿ ಮೈಧಾನದಲ್ಲಿ ನಡೆಯುತ್ತಿರುವ ತಾಂಡವ ಕಲಾನೀಕೆತನ ಸಂಸ್ಥೆ ಬೆಂಗಳೂರು ಆಯೋಜನೆಯಲ್ಲಿ ಮೂಡಿಬಂದ ಕುಮಟಾ ವೈಭವಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ರವಿ ಕುಮಾರ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ರು, ನಂತರ ಅವರು ಮಾತನಾಡಿ ಕುಮಟಾ ಸಾಂಸ್ಕ್ರತಿಕ ಕಲೆಯ ತವರೂರಾಗಿದೆ. ಕುಮಟಾದ ಜನತೆ ಕೂಡ ಕಲೆ,ಕ್ರೀಡೆಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಾರೆ. ಜೊತೆಗೆ ಕುಮಟಾ ವೈಭವದ ಶಕ್ತಿ ಕೂಡ ಈ ವರ್ಷ ಹೆಚ್ಚಾಗಿದೆ ಇದಕ್ಕೆ ಮಂಜುನಾಥ ನಾಯ್ಕ ಅವರ ಕಠಿಣ ಪರಿಶ್ರಮವೇ ಕಾರಣವಾಗಿದೆ ಎಂದರು.

RELATED ARTICLES  ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ ಕುಮಟಾ ಇವರಿಂದ ಮುರ್ಡೇಶ್ವರದಲ್ಲಿ 'ಉಚಿತ ನೇತ್ರ ತಪಾಸಣಾ ಶಿಬಿರ'

ಬಿಜೆಪಿ ಮುಖಂಡ ಮತ್ತು ಕುಮಟಾ ವೈಭವ ಸಮಿತಿಯ ಗೌರವಾಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಮುಂದಿನ ದಿನದಲ್ಲಿ ಈ ವೇದಿಕೆಯನ್ನು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಹಾಗೇ ಮಾಡಲಾಗುತ್ತದೆ ಎಂದರು.

RELATED ARTICLES  ಸೆಲ್ಕೋ, ಬಿವಿಟಿಯ ಅನನ್ಯ ಕೊಡುಗೆ : ಒಂದುವರೆ‌ಕೇವಿ ಸೋಲಾರ್ ಶಕ್ತಿ ಉತ್ಪಾದನೆ : ಬೆಳೆಯೂರು ವೇಷ ಭೂಷಣಗಳಿಗೆ ಬೆಳಕಾಯ್ತು ಸೋಲಾರ್!

ಈ ಕಾರ್ಯಕ್ರಮದ ವೇದಿಕೆಯಲ್ಲಿ. ಮಂಜುನಾಥ ಪಟಗಾರ,ಶಿವರಾಮ ಹರಿಕಾಂತ,ಅನೀತಾ ಮಾಪರಿ,ಜಿ.ಜಿ,ಜೆಗಡೆ,ಮಂಜುನಾಥ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ ಕುಮಟಾ ವೈಭವಕ್ಕೆ ತೆರೆ ಬಿದ್ದಿದೆ. 5 ದಿನಗಳಿಂಧ ಜನತೆಯನ್ನು ರಂಜಿಸಿದ್ದ ಕುಮಟಾ ವೈಭವ ಯಶಸ್ವಿಯಾಗಿ ಸಂಪನ್ನವಾಗಿದೆ.