ಕುಮಟಾ: ಜಿಲ್ಲೆಯ ಸಾಂಸ್ಕೃತಿಕ, ಜನಪದ ಸಂಸ್ಕೃತಿಗೆ ಹಾಲಕ್ಕಿ ಒಕ್ಕಲಿಗರು ನೀಡಿದ ಕೊಡುಗೆ ಅಪಾರ ಎಂದು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭೀವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ನಾಯಕ ತೊರ್ಕೆ ಅಭಿಪ್ರಾಯಪಟ್ಟರು. ಗೋಕರ್ಣದ ಸಮೀಪ ಕಡಮೆಯಲ್ಲಿ ಹಾಲಕ್ಕಿ ಸಮಾಜದವರು ಪ್ರತೀ ವರ್ಷ ನಡೆಸುವ ಹನುಮಂತ ದೇವರ ಪೂಜೆ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ ಅವರು ಹಾಲಕ್ಕಿ ಸಮಾಜದವರ ಜೊತೆ ಕೆಲ ಸಮಯ ಕಳೆದರು.

aa 1

ಹಿಂದೂ ಧರ್ಮವು ವರ್ಷದಾದ್ಯಂತ ಅನೇಕ ಹಬ್ಬಗಳನ್ನು ಹೊಂದಿದೆ. ಹಿಂದೂ ಪಂಚಾಂಗವು ಅವುಗಳ ದಿನಾಂಕಗಳನ್ನು ಗೊತ್ತುಮಾಡುತ್ತದೆ. ಹಬ್ಬಗಳು ವಿಶಿಷ್ಟವಾಗಿ, ಹಲವುವೇಳೆ ಋತುಗಳ ಬದಲಾವಣೆಗಳೊಂದಿಗೆ ತಾಳೆಹೊಂದುವ, ಹಿಂದೂ ಪುರಾಣದ ಘಟನೆಗಳನ್ನು ಆಚರಿಸುತ್ತವೆ. ಮುಖ್ಯವಾಗಿ ನಿರ್ದಿಷ್ಟ ಪಂಥಗಳಿಂದ ಅಥವಾ ಭಾರತೀಯ ಉಪಖಂಡದ ನಿಶ್ಚಿತ ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬಗಳಿವೆ.ಅವುಗಳ ಜೊತೆ ಜೊತೆಗೇ ಇಲ್ಲಿನ ವಿವಿದ ಸಂಪ್ರದಾಯಗಳ ಹಾಗೂ ಸಮೂಹಗಳ ಆಚರಣೆಗಳೂ ವೈವಿದ್ಯಮಯವಾಗಿರುವುದು ವಿಶೇಷ ಅಂತಹ ವಿಶೇಷ ಸಂಪ್ರದಾಯಗಳಲ್ಲಿ ಹಾಲಿಕ್ಕಿ ಸಂಪ್ರದಾಯಗಳೂ ಒಂದು. ಅಂತಹ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದು ಕಡಮೆ ಗ್ರಾಮ. ಇಲ್ಲಿ ನಡೆದ ದೇವರ ಪೂಜೆ ಹಾಗೂ ಸತತ 24 ಗಂಟೆಗಳ ಕಾಲ ನಡೆದ ದೇವರ ಪಲ್ಲಕ್ಕಿ ಉತ್ಸವ ಎಂದು ನಾಗರಾಜ ನಾಯಕ ತೊರ್ಕೆ ಅವರು ಅಭಿಪ್ರಾಯಪಟ್ಟರು.

RELATED ARTICLES  ಶೀಘ್ರದಲ್ಲೇ ಹೊನ್ನಾವರ ಆಸ್ಪತ್ರೆಗೆ ಹೊಸ ಡಯಾಲಿಸಿಸ್ ಮಶಿನ್ : ಶಾಸಕ ದಿನಕರ ಶೆಟ್ಟಿ

ಹಾಲಕ್ಕಿ ಸಮಾಜದ ಬಂಧುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಬೇಕಿದ್ದು ಈ ಕಾರ್ಯಕ್ಕೆ ಸಮಾಜದ ಮುಖಂಡರು ಸಹಕರಿಸಬೇಕು ಎಂದ ಇವರು ಅಲ್ಲಿಯ ದೇವರ ಸಮ್ಮುಖದಲ್ಲಿ ಹಾಲಕ್ಕಿ ಸಮಾಜ ಬಂಧುಗಳಿಗೆ ಧನ ಸಹಾಯ ನೀಡಿದರು. ದೇವರ ಪಲ್ಲಕ್ಕಿ ಹೊತ್ತು ಸಂಬ್ರಮಿಸಿದ ಕ್ಷಣ ಹಾಗೂ ಅವರ ಜೊತೆಗೆ ಸಂತಸದಿಂದ ಭಾಗವಹಿಸಿದ ಕ್ಷಣವನ್ನು ಎಂದೂ ಮರೆಯುವಂತಿಲ್ಲ ಎನ್ನುತ್ತಾರೆ ಅಲ್ಲಿಯ ಹಾಲಕ್ಕಿಗರು.

RELATED ARTICLES  ಪ್ರವಾಸಕ್ಕೆ ಬಂದವರು ನೀರುಪಾಲು : ಕುಮಟಾದ ಬಾಡ ಸಮುದ್ರ ತೀರದಲ್ಲಿ ದುರ್ಘಟನೆ

ನಾಗರಾಜ ನಾಯಕ ತೊರ್ಕೆ ಹಾಲಕ್ಕಿಗಳೊಂದಿಗೆ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಹಾಲಿಕ್ಕಿ ಸಮಾಜದವರು ನಾಗರಾಜ ನಾಯಕರನ್ನು ಪ್ರೀತಿಯಿಂದ ಬರಮಾಡಿಕೊಂಡು ಅವರನ್ನು ಆದರಿಸಿ ನಂತರ ಬೀಳ್ಕೊಟ್ಟರು.