ಶಿರಸಿ: ಅಜ್ಜೀಬಳ ಚಾರಿಟೇಬಲ್ ಟ್ರಸ್ಟ್’ವತಿಯಿಂದ ವೈದೇಹಿ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯನ್ನು ಹಿರಿಯ ಸಹಕಾರಿ ಧುರೀಣ ಜಿ‌.ಟಿ.ಹೆಗಡೆ ತಟ್ಟೀಸರ ಮಾಡಿದರು.

ನಂತರದಲ್ಲಿ ಅವರು ಮಾತನಾಡಿ, ದೀನ ದಲಿತರಿಗೆ, ದುರ್ಬಲ ರಿಗೆ ನಮ್ಮಲ್ಲಿಯ ಜ್ಞಾನವನ್ನು ಉಪಯೋಗಿಸಿಕೊಂಡು ಸಹಾಯ ಮಾಡಬೇಕು. ಸಬಲರಾದವರು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು‌. ಇಂತಹ ಉತ್ತಮ ಕೆಲಸವನ್ನು ಟ್ರಸ್ಟ್ ಮೂಲಕ ಮಾಡುತ್ತಿರುವುದು ಉತ್ತಮ ಕಾರ್ಯ. ತರಬೇತಿ ಪಡೆದವರೂ ಸರಿಯಾಗಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು‌.

RELATED ARTICLES  ಮೇಧಿನಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು.

ಮಹಿಳೆಯರು ಆರ್ಥಿಕ ಸಬಲತೆ ಸಾಧಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಶಿಬಿರದಲ್ಲಿ ಐದು ಜನ ಮಹಿಳೆಯರಿಗೆ ಟೈಲರಿಂಗ್ ಕಲಿಯಲು ಅಗತ್ಯವಿರುವ ವಸ್ತುಗಳ ಕೀಟ್’ಗಳನ್ನು ವಿತರಿಸಲಾಯಿತು. ಅಲ್ಲದೇ, ಒಬ್ಬ ವಿದ್ಯಾರ್ಥಿನಿಗೆ ಕಂಪ್ಯೂಟರ್ ಖರೀದಿಗೆ ಸಹಾಯಧನವನ್ನು ವಿತರಣೆ ಮಾಡಲಾಯಿತು.

RELATED ARTICLES  ತಂದೆಯೇ ವೋಟ್ ಹಾಕದ ಮಗನಿಗೆ ಜಿಲ್ಲೆಯ ಜನ ವೋಟ್ ಹಾಕ್ತಾರಾ?: ಆನಂದ್ ಅಸ್ನೋಟಿಕರ್ ವ್ಯಂಗ್ಯ

ಈ ಸಂದರ್ಭದಲ್ಲಿ ಎಮ್.ಎಮ್.ಭಟ್ ಕಾರೆಕೊಪ್ಪ, ಎಸ್.ಎಸ್.ಹೆಗಡೆ, ಅಂಜನಾ ಭಟ್ ಇದ್ದರು. ಟ್ರಸ್ಟ ಕಾರ್ಯದರ್ಶಿ ವಿದ್ಯುಲತಾ ಹೆಗಡೆ ವಿ.ಎಮ್.ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.