ಡಿಸೆಂಬರ 6 ರಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ
ಕುಮಟಾ: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ 6 ರಂದು ಭಟ್ಕಳ, ಕುಮಟಾ-ಹೊನ್ನಾವರ, ಮತ್ತು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಡಿ ಬರುವ ವಿವಿಧ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವರು.

ಡಿಸೆಂಬರ 6 ರಂದು ಬೆಳಗ್ಗೆ 10.30 ಕ್ಕೆ ಭಟ್ಕಳ ಪೊಲೀಸ್ ಮೈದಾನ ಮದ್ಯಾಹ್ನ 2.30ಕ್ಕೆ ಕುಮಟಾ ಮಣಕಿ ಮೈದಾನ. ಸಂಜೆ 4.30ಕ್ಕೆ ಕಾರವಾರ ರವೀಂದ್ರನಾಥ ಕಡಲ ತೀರದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡುವರು.

RELATED ARTICLES  ಉತ್ತರ ಕನ್ನಡದಲ್ಲಿ ಮತ್ತೆ ಕೊರೋನಾ ಆರ್ಭಟ : ಇಂದು ಆರು ಜನರಲ್ಲಿ ಸೋಂಕು ದೃಢ.

ಕೌಶಾಲ್ಯಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಘನ ಉಪಸ್ಥಿತಿಯನ್ನು ವಹಿಸುವರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉತ್ಸುವಾರಿ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಸಚಿವ ಎಚ್.ಕೆ ಪಾಟೀಲ, ಶಾಸಕ ಸತೀಶ್ ಸೈಲ್, ಜಿಲ್ಲಾ ಪಂಚಾಯತ ಅಧ್ಯೆಕ್ಷೆ ಜಯಶ್ರೀ ಮೋಗೆರ, ಬಸವರಾಜ ಹೊರಟ್ಟಿ, ಶ್ರೀಕಾಂತ ಘೋಟ್ನೇಕರ್, ಎಸ್.ವಿ ಸಂಕನೂರ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳು ಭಾಗವಹಿಸುವರು.

RELATED ARTICLES  ಏ 17 ಕ್ಕೆ ನಾಮಪತ್ರ ಸಲ್ಲಿಕೆ : ದಿನಕರ‌ ಶೆಟ್ಟಿ.