ಗಿಣಿ ಕಚ್ಚಿದ ಹಣ್ಣು ತುಂಬಾ ಸಿಹಿಯಾಗಿರುತ್ತದೆ ಎಂದು ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿರುವ ವಿಷಯವೇ. ಹೇಳಬೇಕೆಂದರೆ ಆ ಸಿಹಿಯನ್ನು ಸವಿದ ಅನುಭವವೂ ನಮಗಿದೆ. ಚೇಪೇಕಾಯಿಯ ಮರ ಹತ್ತಿದಾಗ ಗಿಣಿ ಕಚ್ಚಿದ ಹಣ್ಣನ್ನೇ ಹುಡುಕಿ ತಂದು ಕಚ್ಚಿದ ಭಾಗವನ್ನು ತೆಗೆದು ಉಳಿದದ್ದನ್ನು ತಿನ್ನುತ್ತೇವೆ. ಆದರೆ,ಎಂದಾದರೂ ಗಿಣಿ ಕಚ್ಚಿದ ಹಣ್ಣೇ ಯಾಕೆ ಸಿಹಿಯಾಗಿರುತ್ತದೆ ಎಂಬ ಅನುಮಾನ ನಿಮಲ್ಲಿ ಮೂಡಿತ್ತೇ..?ಹೀಗೆ ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುವುದರ ಹಿಂದಿರುವ ಸಣ್ಣ ಲಾಜಿಕ್ (ತರ್ಕ) ಏನೆಂದು ತಿಳಿದುಕೊಳ್ಳೋಣ.

RELATED ARTICLES  ಹಗಲು ಮರಗೆಲಸ, ರಾತ್ರಿ ಸೆಕ್ಯುರಿಟಿ ಗಾರ್ಡ್! IPLನಲ್ಲಿ ಆಡುತ್ತಿರುವ ಕ್ರಿಕೆಟ್ ತಾರೆಯ ಜೀವನ ಕಥೆ ಇದು!

ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುವುದಿಲ್ಲ. ಗಿಣಿಗಳು ಸಿಹಿಯಾದ ಹಣ್ಣುಗಳನ್ನೇ ಕಚ್ಚುತ್ತವೆ. ಆದ್ದರಿಂದಲೇ ಗಿಣಿ ಕಚ್ಚಿದ ಪ್ರತಿಯೊಂದು ಹಣ್ಣೂ ಸಿಹಿಯಾಗಿರುತ್ತದೆ. ಸಾಮಾನ್ಯವಾಗಿ ಗಿಣಿಗಳು ಹಣ್ಣಿನ ಗಿಡಗಳ ಮೇಲೆಯೇ ಇರುತ್ತವೆ. ಹಣ್ಣು ಬಿಡುವ ಪ್ರತಿಯೊಂದು ಗಿಡವೂ 5 ರೀತಿಯ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳು…

.1.ಅಕ್ಸಿನ್ 2. ಜಿಬ್ಬರೆಲ್ಲಿನ್ 3. ಸೈಟೋಕ್ಯನಿನ್ 4.ಇಥಿಲಿನ್ 5.ಅಬ್ ಸಿಸಿಕ್ ಆಮ್ಲ ಈ ಹಾರ್ಮೋನುಗಳಲ್ಲಿ ಇಥಿಲಿನ್ ಎಂಬುದು ಹಣ್ಣು ಶೀಘ್ರವಾಗಿ ಪಕ್ವಕ್ಕೆ ಬರುವಂತೆ ಪ್ರೇರೇಪಿಸುತ್ತದೆ. ಗಿಣಿಗಳು ಇಥಿಲಿನ್ ನಲ್ಲಿರುವ ಒಂದು ಬಗೆಯ ವಾಸನೆಯನ್ನು ಕಂಡುಹಿಡಿದು ಅದರ ಸಹಾಯದಿಂದ ಪಕ್ವಕ್ಕೆ ಬರಲಿರುವ ಹಣ್ಣನ್ನು ತಿನ್ನಲು ಪ್ರಯತ್ನಿಸುತ್ತವೆ.

RELATED ARTICLES  ದೇಶಪಾಂಡೆ ಸಾಹೇಬರು ಸ್ವಂತ ಖರ್ಚಿನಿಂದ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಿಸಲಿ ಅನಂತಮೂರ್ತಿ ಹೆಗಡೆ ವಿನಂತಿ.

ಹಣ್ಣಿನ ಗಾತ್ರಕ್ಕೆ ತಕ್ಕಂತೆ ತನಗೆ ಬೇಕಾಗುವಷ್ಟು ಹಣ್ಣನ್ನು ತಿಂದು ಉಳಿದಿದ್ದನ್ನು ಬಿಟ್ಟುಬಿಡುತ್ತದೆ.ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುತ್ತದೆ ಎನ್ನುವುದಕ್ಕಿಂತಲೂ ಸಿಹಿಯಾದ ಹಣ್ಣನ್ನು ಗಿಣಿ ಕಚ್ಚುತ್ತದೆ ಎನ್ನುವುದೇ ಸೂಕ್ತ. ಅಲ್ಲವೆ?