ಧರಮಪುರ್: ಕಾಂಗ್ರೆಸ್ ನಲ್ಲಿ ಔರಂಗಜೇಬನ ಆಡಳಿತ ಇದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಪಟ್ಟಾಭಿಷೇಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವ್ಯಂಗ್ಯವಾಡಿದ್ದಾರೆ.

ಇಂದು ವಲ್ಸದ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನ ಔರಂಗಜೇಬ ಆಡಳಿತಕ್ಕೆ ನಾನು ಶುಭಾಶಯ ಕೋರುತ್ತೇನೆ. ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಹೈಕಮಾಂಡ್. ಆದರೆ ನಮಗೆ ದೇಶದ 125 ಕೋಟಿ ಭಾರತೀಯರೇ ಹೈಕಮಾಂಡ್, ಅವರ ಕಾಳಜಿಯೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.

RELATED ARTICLES  ಅರೆಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ...!

ಕಾಂಗ್ರೆಸ್ ಒಂದು ರಾಜಕೀಯ ಪಕ್ಷ ಅಲ್ಲ. ಅದೊಂದು ಕುಟುಂಬ ಎಂದು ಹಲವು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ಜಹಂಗೀರ್ ಮತ್ತು ಶಹಜಹಾನ್ ಗೆ ಉತ್ತರಾಧಿಕಾರಿ ಯಾರು ಎಂಬುದು ಗೊತ್ತಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಲ್ಲೂ ವಂಶಪಾರಂಪರ್ಯ ಆಡಳಿತಕ್ಕೆ ಮೊದಲ ಆತ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ. ಕೇವಲ ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದೆ ಎಂದರು.

RELATED ARTICLES  ವೀಣೆ ಆಕಾರದಲ್ಲಿರುತ್ತದೆ ವಿಶ್ವವಿದ್ಯಾನಿಲಯ ಸ್ವಂತ ಕಟ್ಟಡ!

47 ವರ್ಷದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದ್ದು, ಅವರ ಪ್ರತಿಸ್ಫರ್ಧಿಯಾಗಿ ಇದುವರೆಗೂ ಯಾರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಮುಂದಿನವಾರ ಅಧಿಕೃತವಾಗಿ ಘೋಷಿಸಲಾಗುತ್ತಿದೆ.