ಹಣ್ಣು, ತರಕಾರಿ, ಧಾನ್ಯ, ಕಾಳು, ಗೆಡ್ಡೆಗೆಣಸು, ಸುಗಂಧದ್ರವ್ಯ ಇವುಗಳೆಲ್ಲಾ ಪ್ರಕೃತಿಯಿಂದ ಮಾನವನಿಗೆ ದೊರೆತ ದೊಡ್ಡ ವರವಾಗಿದೆ. ಅನ್ನದೊಂದಿಗೆ ಪ್ರಕೃತಿಸಿದ್ಧವಾದ ಇವುಗಳನ್ನು ಆಹಾರವಾಗಿ ಸೇವಿಸಿದಲ್ಲಿ ಶರೀರಕ್ಕೆ ಅಗತ್ಯವಾದ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಆಯಾ ಕಾಲದಲ್ಲಿ ಬೆಳೆಯುವ ಹಣ್ಣುಗಳನ್ನು ಸೇವಿಸುವುದು ತಲೆತಲಾಂತರ ಗಳಿಂದಲೂ ಬಂದಿದೆ.

ಪ್ರಕೃತಿ ಚಿಕಿತ್ಸೆ ವೈದ್ಯರು, ಇದೇ ಒಂದು ಉತ್ತಮವಾದ ಜೀವನಶೈಲಿ ಎಂದು ನಂಬುತ್ತಾರೆ. ಜೀವವಿರುವ ಪ್ರತಿಯೊಂದು ಜೀವಿಗೂ ಆಹಾರ ಅತ್ಯವಶ್ಯಕ. ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು, ಕೊಬ್ಬಿನ ಪದಾರ್ಥಗಳು. ಖನಿಜ ಲವಣಗಳು, ನಾರುಪದಾರ್ಥಗಳು ಇವೆಲ್ಲವೂ ರೋಗನಿರೋಧಕ ಶಕ್ತಿಗೆ ಅವಶ್ಯಕವಾದ ವಿಟಮಿನ್ ಗಳು ಹಾಗೂ ದೇಹದ ಪೋಷಣೆ ಮತ್ತು ರಕ್ಷಣೆಗೆ ಅವಶ್ಯಕವಾದ ಪದಾರ್ಥಗಳನ್ನು ಹೊಂದಿದವುಗಳೆಂದು ಹೆಸರಿಸಬಹುದು. ಘನ ಮತ್ತು ದ್ರವ ರೂಪಗಳಲ್ಲಿ ಲಭ್ಯವಿರುವ ಆಹಾರಗಳಲ್ಲಿ ದೇಹಕ್ಕೆ ಉತ್ಸಾಹ ನೀಡುವ ಕಾಫಿ, ಟೀ ಇವುಗಳು ಕೂಡಾ ಆಹಾರಪದಾರ್ಥಗಳ ಗುಂಪಿಗೇ ಸೇರುತ್ತವೆ.

RELATED ARTICLES  ಮೊಳಕೆಕಾಳಿನಿಂದಾಗೋ ಲಾಭ ಕೇಳಿದ್ರೆ ನೀವು ತಿಂತಾನೇ ಇರ್ತೀರಿ!

ಹಲವರು ಆರೋಗ್ಯದ ಬಗ್ಗೆ ಜಾಗರೂಕತೆ ಯಿಂದಿರುತ್ತಾರೆ ಆದರೂ ಆರೋಗ್ಯಕ್ಕೆ ಉಪಯುಕ್ತವಾದ ಧಾನ್ಯಗಳನ್ನು ಸೇವಿಸುವುದರ ಬಗ್ಗೆ ಗಮನ ಹರಿಸುವುದಿಲ್ಲ.

ಪ್ರಪಂಚದಲ್ಲಿ ಅದೆಷ್ಟೋ ಜನರು ಅನೇಕ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಅಂತಹವರಲ್ಲಿ ಹೆಚ್ಚಾಗಿ ಹೃದ್ರೋಗಿಗಳೇ ಆಗಿದ್ದು ಉಳಿದವರು ಮಧುಮೇಹ, ಕ್ಯಾನ್ಸರ್ ನಿಂದ ಮರಣಿಸುತ್ತಿದ್ದಾರೆ. ಹೃದ್ರೋಗಗಳಿಗೆ ಪ್ರಪಂಚ ವ್ಯಾಪ್ತಿಯಾಗಿ ಪರಿಶೋಧನೆ ನಡೆಸಿದ ಶಾಸ್ತ್ರಜ್ಞರು ಹೀಗೆ ಹೇಳುತ್ತಾರೆ. ಅಧಿಕ ಕೊಬ್ಬು ಹೃದಯದಲ್ಲಿ ಸಮಗ್ರಹವಾಗಿ ಕೊನೆಗೆ ಪ್ರಾಣಾಪಾಯಸ್ಥಿತಿಗೆ ತಲುಪುತ್ತದೆ ಎಂದು ಗುರ್ತಿಸಿದ್ದಾರೆ. ನಮ್ಮ ಶರೀರದಲ್ಲಿರುವ ಕೊಬ್ಬನ್ನು ಕರಗಿಸಲು ‘ಅಗಸೆ ಬೀಜ’ಗಳನ್ನು ಉಪಯೋಗಿಸುತ್ತಾರೆ. ಕೊಬ್ಬನ್ನು ಕರಗಿಸುವಲ್ಲಿ ಈ ಬೀಜಗಳನ್ನು ಹೊರತುಪಡಿಸಿದರೆ ಇತರೆ ಯಾವುದೇ ಧಾನ್ಯಗಳಿಂದಲೂ ಸಾಧ್ಯವಾಗಿಲ್ಲ ಎಂದು ನಿಪುಣರು ಹೇಳುತ್ತಾರೆ.

RELATED ARTICLES  ಹತ್ತೇ ನಿಮಿಷದಲ್ಲಿ ಹಲ್ಲುನೋವು ಮಾಯ! ಇಲ್ಲಿದೆ ಉಪಾಯ!

ಅಧಿಕ ಕೊಬ್ಬಿನಿಂದ ಸ್ಥೂಲಕಾಯರು, ಹೃದಯಲ್ಲಿ ಕೊಬ್ಬು ಬೆಳೆದು ಹೃದಯ ವಿಸ್ತರಣೆಯಿಂದ ನರಳುತ್ತಿರುವವರು ಪ್ರತಿದಿನ ರಾತ್ರಿ ಒಂದು ಚಮಚ ಅಗಸೆ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಅವುಗಳನ್ನು ಸೇವಿಸುವುದರಿಂದ ಕೊಬ್ಬನ್ನು ಕರಗಿಸುವ ಪೋಷಕಾಂಶಗಳು ದೇಹದೊಳಗೆ ಪ್ರವೇಶಿಸಿ ಕೊಬ್ಬನ್ನು ಕರಗಿಸುತ್ತವೆ.

ಬಿ.ಪಿ. (ರಕ್ತದೊತ್ತಡ) ಯನ್ನು ನಿಯಂತ್ರಿಸುವಲ್ಲಿ ಇವು ಉಪಯೋಗವಾಗುತ್ತವೆ. ಪ್ರಪಂಚದಲ್ಲೇ ಅಧಿಕ ಕೊಬ್ಬನ್ನು ಕರಗಿಸುವಲ್ಲಿ ದಿವ್ಯ ಔಷಧಿಯಾಗಿರುವುದರಿಂದ ಔಷಧಗಳ ತಯಾರಿಯಲ್ಲಿ ಬಳಸಲು ಈ ಧಾನ್ಯಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದ್ದಾರೆ.