ಮೂಡಲಗಿ: ಸ್ಪರ್ಧಾತ್ಮಕ ಯುಗದಲ್ಲಿ ವಿಕಲಚೇತನರ ಕುರಿತು ಅನುಕಂಪ ಬೇಡ ಅವಕಾಶ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾಲಕರ ಪ್ರಬುದ್ಧ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಚಿಕ್ಕೋಡಿ ಉಪನಿರ್ಧೇಶಕರ ಕಛೇರಿ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಹಂತದ ವಿಶ್ವ ವಿಕಲಚೇತನರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅನೇಕ ಕಾರಣಗಳಿಂದ ಸಮಾಜದಲ್ಲಿ ವಿಕಲಚೇತನ ಮಕ್ಕಳಾಗಿರುತ್ತವೆ, ಅವರಿಗೆ ಅಗತ್ಯ ಸರಕಾರಿ ಸೌಲಭ್ಯ, ಆಧುನಿಕ ವೈಧ್ಯಕೀಯ ಉಪಕರಣಗಳ ಮೂಲಕ ಸತತ ಪ್ರಯತ್ನ ಪಟ್ಟರೆ ಅವರು ಕೂಡಾ ಸಾಮಾನ್ಯರಂತೆ ಜೀವನ ನಡೆಸಲು ಸಹಾಯಕವಾಗುವದು. ವಿಶೇಷಚೇತನ ಮಕ್ಕಳನ್ನು ನಾವು ದೇವರ ಮಕ್ಕಳೆಂದು ತಿಳಿದು ಸೇವಾ ಕಾರ್ಯಮಾಡಬೇಕು. ಬುದ್ದಿಮಾಂದ್ಯ, ದೈಹಿಕ ವಿಕಲತೆ, ಕುರುಡ, ಕಿವುದ, ಮೂಕ ಹಾಗೂ ಬಹುವಿಕಲತೆ ಮಕ್ಕಳಿಗೆ ವಿವಿಧ ರೀತಿಯ ಸರಕಾರದ ಸೌಲಭ್ಯಗಳಿದ್ದು ಅವುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಎಲ್ಲರಿಂದ ಆಗಬೇಕೆಂದು ವಿನಂತಿಸಿದರು.

RELATED ARTICLES  ಇಂದಿನ‌ ನಿಮ್ಮ ದಿನ ಫಲ‌ ಹೇಗಿದೆ ಗೊತ್ತಾ? 25/04/2019 ರ ದಿನ ಭವಿಷ್ಯ ಇಲ್ಲಿದೆ.

ಯುವ ಮುಖಂಡ ಪುರಸಭೆ ಸದಸ್ಯ ಡಾ. ಎಸ್.ಎಸ್ ಪಾಟೀಲ್ ಮಾತನಾಡಿ, ಪ್ರಪಂಚದಲ್ಲಿಯೇ ಅತೀ ಹೆಚ್ಚು ವಿಕಲಚೇತನರು ನಮ್ಮ ದೇಶದಲ್ಲಿರಲು ಪ್ರಮುಖ ಕಾರಣ ಆಂತರಿಕ ವಿವಾಹಗಳು, ಸರಿಯಾದ ವೈಧ್ಯಕೀಯ ಜ್ಞಾನದ ಕೊರತೆಯಿಂದಾಗಿ ಇಂತಹ ಮಕ್ಕಳು ಜನಿಸಲು ಕಾರವಾಗಿದೆ. ವಿಕಲಚೇತನರಿಗೂ ಸಾಧನೆ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿರುತ್ತಾರೆ ಅಂತವರಿಗೂ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳಿದ್ದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೋಡಬೇಕೆಂದರು.

RELATED ARTICLES  ದಿನಾಂಕ 01/06/2019 ರ ದಿನ ಭವಿಷ್ಯ ಇಲ್ಲಿದೆ.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಸದಸ್ಯರಾದ ಆರ್.ಬಿ ನೇಮಗೌಡರ, ಶ್ರೀಶೈಲ್ ಗಾಣಿಗೇರ, ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಬಿ.ಎಮ್ ನಂದಿ, ಸಿ.ಆರ್.ಪಿಗಳಾದ ಸಿ.ಎಸ್ ಮೊಹಿತೆ, ಎಫ್ ಆರ್.ಯಲಿಗಾರ, ಎಮ್.ಎಸ್ ಕೊಣ್ಣೂರ, ಎಡ್ವಿನ್ ಪರಸಣ್ಣವರ, ಬಿ.ಎಸ್ ನಂದೆಪ್ಪನವರ, ಪಿ.ಬಿ ಕುಲಕರ್ಣಿ, ಬಿ.ಇ.ಐ.ಆರ್.ಟಿಗಳಾದ ವಾಯ್.ಬಿ ಪಾಟೀಲ್, ವಾಯ್.ಬಿ ಮುಕ್ಕಣ್ಣವರ ಹಾಗೂ ವಿಕಲಚೇತನ ಮಕ್ಕಳು ಪಾಲಕರು ಶಿಕ್ಷಕರು ಉಪಸ್ಥಿತರಿದ್ದರು. ವಿಕಲಚೇತನ ಪರ್ತಕರ್ತ ಸಚೀನ ಪತ್ತಾರ ಅವರನ್ನು ಸತ್ಕರಿಸಿದರು. ವಿಕಲಚೇತನ ಮಕ್ಕಳಿಗೆ ಹಾಗೂ ಪಾಶಲಕರಿಗೆ ಕ್ರೀಡಾಕೂಟಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.