ಕಾರವಾರ: ‘ಓಖಿ’ ಚಂಡಮಾರುತದ ಪರಿಣಾಮವಾಗಿ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯ ಬಂದರು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಮೀನುಗಾರಿಕಾ ದೋಣಿಗಳು ಮತ್ತೆರಡು ದಿನ ಕಡಲಿಗೆ ಇಳಿಯದಂತೆ ಮೀನುಗಾರಿಕಾ ಇಲಾಖೆ ತಿಳಿಸಿದೆ.

ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜ್ಯದ ವಿವಿಧೆಡೆಯ ಹಾಗೂ ಅನ್ಯ ರಾಜ್ಯಗಳ ದೋಣಿಗಳು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆಯ ಬಂದರು ಪ್ರದೇಶದಲ್ಲಿ ಬೀಡುಬಿಟ್ಟಿದ್ದವು. ಆದರೆ ಸಮುದ್ರದಲ್ಲಿ ಅಲೆಗಳ ವೇಗ ಹೆಚ್ಚಿರುವುದರಿಂದ ಮಂಗಳವಾರ ಹಾಗೂ ಬುಧವಾರವೂ ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಮೀನುಗಾರರಿಗೆ ಮುನ್ಸೂಚನೆ ನೀಡಿದೆ.

RELATED ARTICLES  ಕನ್ನಡಕ್ಕಾಗಿ ಹೋರಾಡುವ ಅನಿವಾರ್ಯತೆ ಇದೆ : ಶಾಸಕ ದಿನಕರ ಶೆಟ್ಟಿ

‘ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಡಿ. 4ರ ತನಕ ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಈಗಿನ ವಾತಾವರಣ ಗಮನಿಸಿದರೆ ಇನ್ನೂ ಮೂರ್ನಾಲ್ಕು ದಿನಗಳವರೆಗೆ ಕಡಲಿಗಿಳಿಯಲು ಸಾಧ್ಯವಾಗದ ಸ್ಥಿತಿ ಇದೆ.

ಕಡಲಿನಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ನಗರದ ಬೈತ್‌ಖೋಲ್‌ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಗಳ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ. ಹೊರ ಪ್ರದೇಶದಲ್ಲಿದ್ದ ದೋಣಿಗಳೆಲ್ಲವೂ ಮರಳಿ ದಡದತ್ತ ಬರುತ್ತಿವೆ’ ಎಂದು ಮೀನುಗಾರ ಮುಖಂಡ ಮೋಹನ ಬೋಳಶೆಟ್ಟಿಕರ ತಿಳಿಸಿದರು.

RELATED ARTICLES  ಗೋ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ : ಅಂಕೋಲಾದಲ್ಲಿ ನಡೆದ ಘಟನೆಯಲ್ಲಿ ಬಲಿಯಾದ ಮೂರು ಹೋರಿಗಳು.

‘ನಮ್ಮ ಜಿಲ್ಲೆಯ ಕಡಲತೀರಗಳಿಗೆ ಚಂಡಮಾರುತದ ಪರಿಣಾಮ ಅಷ್ಟೇನೂ ಬೀರುವುದಿಲ್ಲ. ಅದು ಮಹಾರಾಷ್ಟ್ರ, ಗುಜರಾತ್ ಭಾಗಕ್ಕೆ ಚಲಿಸುವ ವೇಳೆ ಇಲ್ಲಿ ಗಾಳಿ ಸಹಿತ ಮಳೆ ಉಂಟಾಗಬಹುದು. ಆದರೆ ಸಮುದ್ರದ ಅಲೆಗಳ ಅಬ್ಬರ ದ್ವಿಗುಣಗೊಂಡಿದೆ.