ದೇಶದ ಎಲ್ಲ ಬ್ಯಾಂಕ್ ಗ್ರಾಹಕರು ತಿಳಿದುಕೊಳ್ಳಬೇಕಾದ ವಿಷ್ಯವಿದು. ಬ್ಯಾಂಕ್ ನಿಂದ ಈ ರೀತಿಯ ಎಸ್ಎಂಎಸ್ ಬಂದಲ್ಲಿ ಡಿಲಿಟ್ ಮಾಡಬೇಡಿ. ನೀವು ಮಾಡುವ ತಪ್ಪಿನಿಂದ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ.

ದೇಶದಲ್ಲಿ ಇತ್ತೀಚಿಗೆ ಆನ್ಲೈನ್ ಹಣ ವಿನಿಮಯದ ವೇಳೆ ಮೋಸವಾಗ್ತಿದೆ. ಅನೇಕ ವಂಚನೆ ಪ್ರಕರಣಗಳು ದಾಖಲಾಗಿವೆ. ಜನರಿಗೆ ಆರ್ ಬಿ ಐ ಹೆಸರಿನಲ್ಲಿ ನಕಲಿ ಕರೆ ಹಾಗೂ ಸಂದೇಶ ಬರ್ತಿದೆ. ಇದು ಜನರು ಹಾಗೂ ಸೈಬರ್ ಸೆಲ್ ನವರ ತಲೆಬಿಸಿಗೆ ಕಾರಣವಾಗಿದೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡ ಹೆಜ್ಜೆಯನ್ನಿಟ್ಟಿದೆ.

RELATED ARTICLES  ಗೋಕರ್ಣದಲ್ಲಿ ಹಾಲು ಹಬ್ಬ.

ಈ ಬಗ್ಗೆ ಚಂಡೀಗಢದ ಆರ್ ಬಿ ಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬ್ಯಾಂಕ್, ಜನರಿಗೆ ಎಸ್ಎಂಎಸ್ ಒಂದನ್ನು ಕಳಿಸುತ್ತಿದೆ. ಈ ಎಸ್ಎಂಎಸ್ ನಲ್ಲಿ ಆರ್ ಬಿ ಐಗೆ ಸಂಬಂಧಿಸಿದ ಮಾಹಿತಿಯಿದೆ. ಆರ್ ಬಿ ಐ ಸ್ಪೀಕಿಂಗ್ ಹೆಸರಿನಲ್ಲಿ ಸಂದೇಶ ರವಾನೆ ಮಾಡಲಾಗ್ತಿದೆ. ಈ ಮೂಲಕ ಆರ್ ಬಿ ಐ ಹೆಸರಿನಲ್ಲಾಗುತ್ತಿರುವ ಮೋಸವನ್ನು ತಡೆಯುವ ಯತ್ನದಲ್ಲಿದೆ.

ಎಸ್ಎಂಎಸ್ ಜೊತೆ ಸಹಾಯವಾಣಿ ನಂಬರ್ 8691960000 ನೀಡುತ್ತಿದೆ. ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಜನರು ನಕಲಿ ಕರೆ ಯಾವುದು ಎಂಬುದನ್ನು ದೃಡಪಡಿಸಿಕೊಳ್ಳಬಹುದಾಗಿದೆ. ಇದೇ ಮೊದಲಲ್ಲ. ಇನ್ಮುಂದೆಯೂ ಆರ್ ಬಿ ಐ ಇಂಥ ಸಂದೇಶ ಕಳುಹಿಸಲಿದೆ. ಆದ್ರೆ ಯಾವಾಗ ಆರ್ ಬಿ ಐ ಎಸ್ಎಂಎಸ್ ಬಂದ್ರೂ ಡಿಲಿಟ್ ಮಾಡುವ ಮುನ್ನ ಸರಿಯಾಗಿ ಓದಿ ತಿಳಿದುಕೊಳ್ಳಿ.

RELATED ARTICLES  ಶಾಸಕಿ‌ ಶಾರದಾ ಶೆಟ್ಟಿಯವರ ತೇಜೋವಧೆಗೆ ಪ್ರಯತ್ನ: ಕಾಂಗ್ರೆಸ್ ಮುಖಡರಿಂದ ಖಂಡನೆ.

ಬ್ಯಾಂಕ್ ಎಂದೂ ನಿಮ್ಮ ಪಿನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಒಂದು ವೇಳೆ ಇಂತ ಮಾಹಿತಿ ಕೇಳುವ ಕರೆ ಬಂದಲ್ಲಿ ತಕ್ಷಣ ಎಚ್ಚೆತ್ತು ಆರ್ ಬಿ ಐ ಸಹಾಯವಾಣಿಗೆ ಕರೆ ಮಾಡಿ.