ಭಟ್ಕಳ: ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸಮಾತ್ರವಾಗಬಾರದು ಎಂದು ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹೇಳಿದರು.

FB IMG 1512548424748
ಸರ್ಕಾರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಭಟ್ಕಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಪ್ರವಾಸ ಸಮಯದಲ್ಲಿ ಚಾಲನೆ ನೀಡಲಿದ್ದೇನೆ. ದೇವಾಲಯದಲ್ಲಿ ದಲಿತ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಕಾನೂನುಗಳಿಲ್ಲ. ಆದರೆ ನಾರಾಯಣ ಗುರು ಅವರು ಹೇಳಿದ ದಾರಿಯಲ್ಲಿ ನಾವು ಸಾಗುತ್ತಾ ಇದ್ದೇವೆ. ಯಾರೂ ಕೂಡಾ ದೇವಸ್ಥಾನ ನಿರ್ಮಿಸಿಕೊಂಡು ಅವರೇ ಅರ್ಚಕರಾಗಬಹುದೆಂದು ಹೇಳಿದರು.

RELATED ARTICLES  ಕುಮಟಾ: ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಮಾಡಿದ ಶಾಸಕ ದಿನಕರ ಶೆಟ್ಟಿ

ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇವೆಲ್ಲಾ ರಾಜಕೀಯ ನೇಮಕ. ದೆಹಲಿಯಂಥ ಸಣ್ಣ ರಾಜ್ಯದಲ್ಲೂ ಕೂಡಾ ರಾಜಕೀಯ ಕಾರ್ಯದರ್ಶಿಗಳು ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವ ಪ್ರಸಾದ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್‍.ವಿ.ದೇಶಪಾಂಡೆ, ಶಾಸಕ ಮಂಕಾಳು ವೈದ್ಯ ಹಾಗೂ ಇನ್ನಿತರರು ಇದ್ದರು.

RELATED ARTICLES  ಪ್ರಥಮ ಸ್ಥಾನ ಪಡೆದು ಸಾಧನೆಮಾಡಿದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು.