ಕುಮಟಾ ವಿಧಾನಸಭಾ ಕ್ಷೇತ್ರಗಳ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದೇ ಮೊದಲಬಾರಿ ಕುಮಟಾಕ್ಕೆ ಆಗಮಿಸಿದ್ರು. ಜಿಲ್ಲಾಡಳಿತ ಕುಮಟಾದ ಮಣಕಿ ಮೈಧಾನದಲ್ಲಿ ಅದ್ದೂರಿಯಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದರಾಮಯ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಹಲವು ಕಾಮಗಾರಿಗಳ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಉತ್ತರ ಕನ್ನಡದ ಜನತೆ ಅತಿಬುದ್ದಿವಂತರು, ಅವರಿಗೆ ನಾವು ಹೇಳಿಕೊಡಬೇಕಾಗಿರುವುದು ಏನು ಇಲ್ಲ ಎಂದರು.

ಬಿ.ಜೆ.ಪಿ ಪಕ್ಷಕ್ಕೆ ಸುಳ್ಳು ಹೇಳುವುದು,ಟೀಕೆ ಮಾಡುವುದು ವೃತ್ತಿಯಾಗಿದೆ. ಆದರೆ ನಾನೂ ಮೊದಲಿನಿಂದಲು ಹೇಳುತ್ತಿದ್ದೆನೆ ನೇರವಾಗಿ ಚರ್ಚೆಯಲ್ಲಿ ಭಾಗಿಯಾಗಿ ನಮ್ಮ ಸರಕಾರದ ಅವಧಿಯಲ್ಲಿ ಮತ್ತು ನಿಮ್ಮ ಸರಕಾರದ ಅವಧಿಯಲ್ಲಿ ಏನು ಮಾಡಿದ್ದಿರಿ? ಎಂದು ಹೇಳಿ ಎಂದರೆ ಯಡಿಯೂರಪ್ಪನವರು ಇಲ್ಲಿಯವರೆಗೆ ಮಾತನಾಡಿಲ್ಲ ಎಂದು ಟೀಕಿಸಿದರು,
ಈ ಭಾಗದ ಸಂಸದರು ಕೂಡ ನನ್ನನ್ನು ಏಕವಚನದಲ್ಲಿ ಕರೆಯುತ್ತಾರೆ ಅವರ ಸಂಸ್ಕøತಿ ಏನು ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.

RELATED ARTICLES  ಎಲ್ಲ ತುರ್ತು ಸೇವೆಗೆ ಒಂದೇ ಸಂಖ್ಯೆ

ವದ

ಉಸ್ತುವಾರಿ ಸಚಿವರಾದ ಆರ್.ವಿ ದೇಶಪಾಂಡೆ ಮಾತನಾಡಿ ಈ ಭಾಗದ ಶಾಸಕರು ಬಹಳ ಕ್ರಿಯಾಶೀಲರಾಗಿದ್ದಾರೆ. ಅವರ ಧೈರ್ಯಕ್ಕೆ ನಾನು ಮೆಚ್ಚಿದ್ದೇನೆ ಎಂದ ಅವರು ಬಿ.ಜೆ.ಪಿ ಪಕ್ಷದವರು ಧರ್ಮದ ಹೆಸರಿನಲ್ಲಿ ರಾಜಕಿಯ ಮಾಡುತ್ತಿದ್ದಾರೆ. ಅದು ಪಾಪವಾಗಿದೆ. ಬಿ.ಜೆ.ಪಿ ಪಕ್ಷ ಕೇವಲ ಧರ್ಮದ ಬಗ್ಗೆ ಮಾತನಾಡುತ್ತೆ. ನೂನೂ ಕೂಡ ಹಿಂದೂ ಆದರೆ ನಾನೂ ಎಲ್ಲಾ ಧರ್ಮದ ಸ್ಥಳಗಳಿಗೆ ಹೋಗುತ್ತೇನೆ. ಘರ್ಷಣೆಯಿಂದ ಗಲಭೆಯಿಂದ ಮತ ಪಡೆಯಲು ಸಾಧ್ಯವಿಲ್ಲ, ಈ ಭಾಗದ ಸಂಸದರು ಎಷ್ಟು ಕಾಮಗಾರಿಯನ್ನು ಮಾಡಿದ್ದಾರೆ,ಕೇವಲ ಬಾಷಣದಿಂದ,ಪ್ರಚೋಧನಕಾರಿ ಮಾತಿನಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದರು.

ಈ ವೇಳೆ ಪ್ರಾಸ್ಥಾವಿಕ ಮಾತನಾಡಿದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ , ನನಗೆ ನಮ್ಮ ಭಾಗಕ್ಕೆ ಮುಖ್ಯಮಂತ್ರಿಗಳು ಆಗಮಿಸಿರುವುದು ಬಹಳ ಖುಷಿಯಾಗಿದೆ, ನಾನೂ ಹೇಳಿದ ಎಲ್ಲಾ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದಾರೆ ಎಂದರು. ಅಲ್ಲದೆ, ಇನ್ನು ಆಗಬೇಕಾದ ಹಲವು ಕಾಮಗಾರಿಗಳ ವಿವಿರ ನೀಡಿದರು.

RELATED ARTICLES  ಅಂತರ್ಜಲವನ್ನು ಉಳಿಸಿ ಹೆಚ್ಚಿಸುವ ಕಾರ್ಯ ಎಲ್ಲರಿಂದಾಗಲಿ.

ಷಷ 1

ಈ ಕಾರ್ಯಕ್ರಮದಲ್ಲಿ ಅನೇಕ ಫಲಾನುಭವಿಗಳಿಗೆ ಮುಖ್ಯಮಂತ್ರಗಳಿಂದ ಪವರ್ ಟಿಲ್ಲರ್,ಸಹಾಯಧನದ ಚೇಕ್‍ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜನಸಾಗರವೇ ಹರಿದುಬಂದಿತ್ತು. ಅದರಲ್ಲಿಯು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು. ಈ ವೇಳೆ ಶಾಸಕರು ಎಲ್ಲರತ್ತ ಕೈಬೀಸಿ ತಮ್ಮ ಔದಾರ್ಯತೆಯನ್ನು ಮೆರೆದರು.

ಡಡಡ

ಈ ಕಾಯ್ರಕ್ರಮದ ವೇದಿಕೆಯಲ್ಲಿ ಸಚಿವರಾದ ಎಚ್,ಸಿ ಮಹದೇವಪ್ಪ,ಯುವ ಮುಖಂಡರಾದ ರವಿ ಶೆಟ್ಟಿ, ತಾರಾ ಗೌಡ, , ಪುರಸಭಾ ಅಧ್ಯಕ್ಷರಾದ ಮಧೂಸೂಧನ ಶೆಟ್ ,ಜಗದೀಪ ತೆಂಗೇರಿ,ವಿ.ಎಲ್,ನಾಯ್ಕ, ಸಚಿನ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.