ಬನವಾಸಿ: ಕನ್ನಡ ನಾಡಿನ ಮೊದಲ ರಾಜಧಾನಿ ಹಾಗೂ ಕದಂಬರ ರಾಜಧಾನಿಗೆ ಇತ್ತೀಚಿಗೆ ನೀವು ಭೇಟಿ ನೀಡಿದ್ದರೆ ಅಲ್ಲಿಯ ಪರಿಸ್ಥಿತಿ ನೋಡಿ ನಿಮಗೆ ಬೇಸರ ಮೂಡುತ್ತದೆ. ಕಾರಣ ಇಲ್ಲಿನ ಪ್ರಸಿದ್ಧ ಮಧುಕೇಶ್ವರ ದೇವಾಲಯದ ಸದ್ಯದ ಸ್ಥಿತಿ.

ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದು ಎಂದೇ ಹೇಳಲಾಗುವ, 2000 ವರ್ಷಗಳಷ್ಟು ಹಳೆಯದಾದ ಕದಂಬರ ಈ ದೇವಾಲಯ ಈಗ ಶಿಥಿಲಾವಸ್ಥೆ ತಲುಪಿದೆ. ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯದ ಹಲವು ಕಂಬಗಳು ಬಿರುಕು ಬಿಟ್ಟಿವೆ.

RELATED ARTICLES  ಸಾಧಕನ ಮನೆಗೆ ತೆರಳಿ ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು

ದೇವಾಲಯದ ಹೊರವಲಯ ಗಬ್ಬೆದ್ದು ನಾರುತ್ತಿದ್ದು, ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಪಕ್ಕದಲ್ಲಿಯೇ ಇರುವ ವರದಾ ನದಿ ತಟವೂ ಕಸದರಾಶಿ ಆಗರವಾಗಿದೆ. 9 ಎಕರೆ ವೀಸ್ತಿರ್ಣದಲ್ಲಿರುವ ಪಂಪವನ ಬಿಡಾಡಿ ದನಗಳ ಕೊಟ್ಟಿಗೆಯಂತಾಗಿದೆ. ಕನ್ನಡ ನಾಡಿನ ಸಂಸ್ಕೃತಿಯ ತಾಣದಂತಿರುವ ಬನವಾಸಿ ಈಗ ಅಧೋಗತಿ ತಲುಪಿರುವುದು ಖೇದಕರ ಸಂಗತಿ.

RELATED ARTICLES  ಉತ್ತರಕನ್ನಡಿಗರಿಗೆ ಬಿಗ್ ಶಾಕ್ …! ಭಟ್ಕಳದಲ್ಲಿ 12 ಜನರಲ್ಲಿ ಕೊರೋನಾ ಪಾಸಿಟೀವ್

ನವೆಂಬರ್​​​​ ಬಂತೆಂದರೆ ಸರ್ಕಾರ ಬನವಾಸಿಯ ಬಗ್ಗೆ ಮಾತನಾಡಿ ನಂತರ ಮರೆತು ಹೋಗುತ್ತೆ. ಅದರ ಪರಿಣಾಮ ಐತಿಹಾಸಿಕ ದೇವಾಲಯ ಈ ಹಂತ ತಲುಪಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.