ಅಭಿಮಾನಿಗಳು ಕಷ್ಟದಲ್ಲಿದ್ದರೆ ಕಿಚ್ಚ ಸುದೀಪ್‌ ಮಿಡಿಯುತ್ತಾರೆ. ಅದಕ್ಕೆ ಉದಾಹರಣೆಯೆಂಬಂತೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಒಬ್ಬ ಅಭಿಮಾನಿಯ ಕೊನೆ ಆಸೆಯನ್ನು ಕಿಚ್ಚ ಸುದೀಪ್‌ ಈಡೇರಿಸಿದ್ದಾರೆ.

ವಿನುತಾ ಎಂಬ ಯುವತಿ ಸಾಕಷ್ಟು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ವೈದ್ಯರು ವಿನುತಾರದ್ದು ಕೊನೆಯ ಹಂತ ಬದುಕುವುದು ಬಹಳ ಕಷ್ಟ ಎಂದು ಹೇಳಿದ್ದಾರೆ. ಈ ವಿನುತಾರ ಕೊನೆ ಆಸೆ ಸುದೀಪ್‌ ಅವರನ್ನು ಮೀಟ್‌ ಮಾಡಿ ಅವರನ್ನು ಮಾತನಾಡಿಸುವುದು, ಹಾಗಾಗಿ ಸಾಯುವುದರೊಳಗೆ ಅವರನ್ನು ಭೇಟಿ ಮಾಡಿ ನಾನು ಮಾತನಾಡಿಸಬೇಕು ಎಂದು ತಮ್ಮ ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಅದರಂತೆ ಅವರ ಕುಟುಂಬದವರು ಸುದೀಪ್‌ ಅಭಿಮಾನಿಗಳನ್ನು ಭೇಟಿ ಮಾಡಿ ವಿನುತಾ ಅವರ ಆಸೆಯನ್ನು ತಿಳಿಸಿದ್ದಾರೆ.

RELATED ARTICLES  ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೋ ಕಳ್ಳತನ ಕೇಸ್ : ಆರೋಪಿಗಳು ಪೊಲೀಸ್ ಕಸ್ಟಡಿಗೆ.

ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿ ಅಧ್ಯಕ್ಷ ನವೀನ್‌ ಗೌಡ ಸುದೀಪ್‌ ಅವರಿಗೆ ಈ ವಿಷಯ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಸುದೀಪ್‌ ಬುಧವಾರ ವಿನುತಾರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಕಷ್ಟ ಎಂದ ಕೂಡಲೇ ಸುದೀಪ್‌ ಧಾವಿಸಿ ಬರುತ್ತಾರೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

RELATED ARTICLES  ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂಟೇನರ್ ಪಲ್ಟಿ.