ಹೊನ್ನಾವರ: ಹೊನ್ನಾವರದಲ್ಲಿ ನಿನ್ನೆ ತಡರಾತ್ರಿ ಬಸ್‍ಸ್ಟ್ಯಾಂಡ್ ಸಮೀಪ ನಡೆದ ಕೋಮು ಸಂಘರ್ಷಕ್ಕೆ ಸಂಬಂಧಪಟ್ಟಂತೆ ಎರಡೂ ಕೋಮಿಗೆ ಸೇರಿದ 70ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. 10ಕ್ಕೂ ಹೆಚ್ಚು ಟಾಂಪೋಗಳ ಮೇಲೆ ಕಲ್ಲುತೂರಲಾಗಿದ್ದು, ಅಪಾರ ಹಾನಿ ಸಂಭವಿಸಿದೆ.
ಅಲ್ಲದೆ, ತಡರಾತ್ರಿ ಇಬ್ಬರು ಅಂಗಡಿಬಂದ್ ಮಾಡಿ ಮನೆಗೆ ತೆರಳುತ್ತಿರುವ ವೇಳೆ ಅಪರಿಚಿತ ದುಷ್ಕರ್ಮಿಗಳು, ಇವರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ . ಕೋಮು ಗಲಭೆಯಿಂದಾಗಿ ಹೊನ್ನಾವರ ಸಂಪೂರ್ಣ ಉದ್ವಿಗ್ನಗೊಂಡಿದ್ದು, ಎಲ್ಲೆಡೆ ಬಿಗಿ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ, ಹಿಂದೂ ಸಂಘಟನೆಗಳು ಬಂದ್‍ಗೆ ಕರೆನೀಡಿದ್ದು, ಅಂಗಡಿ-ಮುಂಗಟ್ಟುಗಳನ್ನು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮುಚ್ಚುತ್ತಿದ್ದಾರೆ.
RELATED ARTICLES ಒಂದೂವರೆ ವರ್ಷ ಬಂದ್ ಆಗಲಿದೆಯೇ ಕುಮಟಾ- ಶಿರಸಿ ರಸ್ತೆ ? ಪರ್ಯಾಯ ಮಾರ್ಗದ ಬಗ್ಗೆ ನಡೆದಿದೆ ಚಿಂತನೆ!
ಪೊಲೀಸರು ಎಲ್ಲೆಡೆ ಗಸ್ತು ತಿರುಗುತ್ತಿದ್ದು, ಶಾಂತಿ-ಸುವ್ಯವಸ್ಥೆ, ಕಾನೂನು ಕಾಪಾಡಲು ಮುಂದಾಗಿದ್ದಾರೆ. ಅಲ್ಲದೆ, ಸಾರ್ವಜನಿಕರು ಸಂಯಮದಿಂದ ವರ್ತಿಸುವಂತೆ ಕರೆ ನೀಡಿದ್ದಾರೆ.