ಗುಜರಾತ್ ಚುನಾವಣೆ ದಿನೇದಿನೇ ರಂಗೇರುತ್ತಿರುವುದು ಒಂದುಕಡೆಯಾದರೆ ಮೋದಿ ವಿರುದ್ಧ ಸಿಡಿದೆದ್ದಿರುವ ಹಾರ್ದಿಕ್ ಪಟೇಲ್ ಬಿಜೆಪಿಗೆ ಪ್ರತಿನಿತ್ಯ ತಲೆನೋವಾಗಿ ಪರಿಣಮಿಸಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಮುಂದಿರುತ್ತಿದ್ದ ಮೋದಿ ಅಥವಾ ಬಿಜೆಪಿಯನ್ನು ಈ ಬಾರಿ ಹಾರ್ದಿಕ್ ಪಟೇಲ್ ಹಿಂದಿಕ್ಕಿರುವುದು ಕೇಸರಿ ಪಕ್ಷದ ಆತಂಕಕ್ಕೆ ಕಾರಣವಾಗಿದೆ.
ಭಾಷಣ ಮಾಡಿ ಮೋಡಿ ಮಾಡುವುದರಲ್ಲಿ ನಿಸ್ಸಿಮರಾಗಿರುವ ಪ್ರಧಾನಿ ಮೋದಿ ಅವರ ಭಾಷಣ ಫೇಸ್ ಬುಕ್ ಲೈವ್ ನಲ್ಲಿ ಭಿತ್ತರಗೊಳ್ಳುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಕಳೆದ ಏಳು ಫೇಸ್ ಬುಕ್ ಲೈವ್ ಭಾಷಣದಲ್ಲಿ ಮೋದಿ ಭಾಷಣಕ್ಕಿಂತ ಹಾರ್ದಿಕ್ ಭಾಷಣಕ್ಕೆ ಹೆಚ್ಚಿನ ಲೈಕ್ ಮತ್ತು ಪ್ರತಿಕ್ರಿಯೆ ಸಿಕ್ಕಿವೆ.
ಮೋದಿಯ ಏಳು ಫೇಸ್ ಬುಕ್ ಲೈವ್ ಭಾಷಣವನ್ನು ಬರೀ 10 ಲಕ್ಷ ಮಂದಿ ವೀಕ್ಷಿಸಿದ್ದರೆ, ಹಾರ್ದಿಕ್ ಪಟೇಲ್ ಅವರ ಏಳು ಲೈವ್ ಭಾಷಣಗಳನ್ನು ವೀಕ್ಷಿಸಿದವರ ಸಂಖ್ಯೆ 33 ಲಕ್ಷ ದಾಟಿರುವುದು ಮೋದಿ ಟೀಂಗೆ ತಲೆನೋವಾಗಿದೆ.
ಇದು ಫೇಸ್ ಬುಕ್ ಲೈವ್ ಭಾಷಣದ ಕತೆಯಾದರೆ ಫೇಸ್ ಬುಕ್ ಪೇಜ್ ನಲ್ಲೂ ಮೋದಿಯನ್ನು ಹಿಂದಿಕ್ಕಿದೆಯಂತೆ.
ಬಿಜೆಪಿಗೆ ಮತ ಹಾಕಬೇಡಿ ಎಂದು ಹಾರ್ದಿಕ್ ಪಟೇಲ್ ಮನವಿ ಮಾಡಿ ಹಾಕಿರುವ ಫೇಸ್ ಬುಕ್ ಪೇಜ್ ಗೆ 8 ಲಕ್ಷ ಲೈಕ್ ಗಳು ಸಿಕ್ಕಿವೆ. ವಿಚಿತ್ರ ಎಂದರೆ ಗುಜರಾತ್ ಬಿಜೆಪಿಯ ಅಧಿಕೃತ ಫೇಸ್ ಬುಕ್ ಪೇಜ್ ಗಿಂತ 300 ಪಟ್ಟು ಹೆಚ್ಚಿದೆಯಂತೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದ ಮೋದಿ ಮತ್ತು ಬಿಜೆಪಿ ಬಾಣ ಅವರಿಗೇ ತಿರುಗಿರುವುದಂತೂ ಸುಳ್ಳಲ ಎಂದು ಬಿಜೆಪಿ ಎದುರಾಳಿ ಪಕ್ಷಗಳು ಬಣ್ಣಿಸುತ್ತಿವೆ.