ಪ್ರಗತಿಪರ ಚಿಂತನೆಗಳಿಂದ ಪತ್ರಿಕೆ ಆರಂಭಿಸಿ ಮೈಸೂರಿನಲ್ಲಿ ಮನೆಮಾತಾಗಿದ್ದ ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರು ಇಹಲೋಕ ತ್ಯಜಿಸಿದ್ದಾರೆ.

ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂದೋಲನ ದಿನಪತ್ರಿಕೆ ಕಚೇರಿ ಬಳಿ ಇರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

70ರ ದಶಕದಲ್ಲಿ ಧಾರವಾಡದಿಂದ ಮೈಸೂರಿಗೆ ಬಂದು ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ಕೋಟಿ ಅವರು ಪ್ರಗತಿಪರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಮೊದಲಿಗೆ ಆಂದೋಲನ ವಾರಪತ್ರಿಕೆ ಆರಂಭಿಸಿದರು.

RELATED ARTICLES  ಮಾಧ್ಯಮಗಳು ರಾಜಕೀಯೇತರ ಸುದ್ದಿಗಳಿಗೂ ಪ್ರಮುಖ್ಯತೆ ನೀಡಬೇಕು: ಪ್ರಧಾನಿ

ಅನೇಕ ಪತ್ರಕರ್ತರ ವೃತ್ತಿ ಜೀವನಕ್ಕೆ ನಾಂದಿ ಹಾಡಿದ್ದ ರಾಜಶೇಖರ ಕೋಟಿ ಅವರು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು ಎಂದು ಕೆಲವರು ಹೇಳಿದ್ದಾರೆ. ಪ್ರಾಮಾಣಿಕ ಪತ್ರಕರ್ತನಾಗಿ ಯಾವುದೇ ಆಮಿಷಕ್ಕೆ ಒಳಗಾಗದೆ ಒಂದು ವಾರಪತ್ರಿಕೆಯನ್ನು ದಿನಪತ್ರಿಕೆಯನ್ನಾಗಿ ಪರಿವರ್ತಿಸಿ, ದೊಡ್ಡ ದೊಡ್ಡ ಪತ್ರಿಕೆಗಳಿಗೂ ಪೈಪೋಟಿ ಕೊಟ್ಟಿದ್ದರು.

RELATED ARTICLES  ಕಾರವಾರದಲ್ಲಿ ಗಾಂಜಾ ಮಾರಾಟ ಯತ್ನ : ಇಬ್ಬರು ಪೊಲೀಸ್ ಬಲೆಗೆ

ಇಂದಿಗೂ ಮೈಸೂರಿನಲ್ಲಿ ಆಂದೋಲನ ಪತ್ರಿಕೆ ತನ್ನದೆ ಆದ ಪ್ರಸರಣವನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಹೆಸರೂ ಮಾಡಿದೆ. ಇಂತಹ ಪ್ರಮಾಣಿಕ ಹಿರಿಯ ಪತ್ರಕರ್ತನನ್ನು ಪತ್ರಿಕಾರಂಗ ಇಂದು ಕಳೆದುಕೊಂಡಂತಾಗಿದೆ.