18 ವರ್ಷ ಮೇಲ್ಪಟ್ಟವರು ಬಿಡಿ, ಸಿಗರೇಟು ಜೊತೆಗೆ ಎಣ್ಣೆ ಕೂಡ ಹೊಡೆಯಬಹುದು ಎಂದುಕೊಂಡು ಇನ್ನುಮುಂದೆ ಎಣ್ಣೆ ಹೊಡೆಯೋಕೆ ಹೋಗೋಕೆ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ.

ಇನ್ನು ಮುಂದೆ ಎಣ್ಣೆ ಹೊಡಿಬೇಕು ಅಂದ್ರೆ ಅವರ ವಯೋಮಿತಿ 21-23 ಆಗಿರಬೇಕು. ಇಂತಹದೊಂದು ಅಬಕಾರಿ ನಿಯಮವನ್ನು ಜಾರಿಗೆ ತರಲು ಕೇರಳ ಸರ್ಕಾರ ಮುಂದಾಗಿದೆ.

RELATED ARTICLES  ಸಚಿವ ಸ್ಥಾನಗಳಿಗಾಗಿ ಹಗ್ಗಜಗ್ಗಾಟ.

ಕೇರಳದಲ್ಲಿ ಸಿಪಿಎಂ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಅಬಕಾರಿ ನಿಯಮದಲ್ಲಿ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.

ಈ ಮುಂಚೆ ಕೇರಳದಲ್ಲಿ ಬಾರ್ ಗಳಿಗೆ ನಿಷೇಧ ಹೇರಲಾಗಿತ್ತು. ನಂತರ ಸ್ಟಾರ್ ಹೋಟೆಲ್ ಗಳಲ್ಲಿ ಮತ್ತು ರೆಸ್ಟೊರೆಂಟ್ ಗಳಲ್ಲಿ ಬಾರ್ ಗಳಲ್ಲಿ ಮಾತ್ರ ಮದ್ಯ ಸರಬರಾಜು ಮಾಡಲು ಅನುವು ಮಾಡಿಕೊಡಲಾಗಿತ್ತು.

RELATED ARTICLES  ಮೇ 3 ರ ವರೆಗೆ ಲಾಕದ ಡೌನ್..! ಕರೋನಾ ಲಾಕ್ ಡೌನ್ ಬಗ್ಗೆ ಮೋದಿ ಮಾತು.

ಇದೀಗ ಕುಡಿಯುವವರ ವಯೋಮಿತಿಯನ್ನು ಹೆಚ್ಚಿಸಲು ಹೊರಟಿರುವುದರಿಂದ ಎಣ್ಣೆ ಮಾರಾಟಗಾರರಿಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.