ನಿಮ್ಮ ಹತ್ತಿರ ಕಾರ್ ಇದೆಯೇ? ಆಗಿದ್ದರೆ ಇನ್ನುಮುಂದೆ ನಿಮಗೆ ಗ್ಯಾಸ್ ಸಬ್ಸಿಡಿ ಸಿಗೋದು ಡೌಟ್!
ಏಕಪ್ಪ ಅಂದ್ರೆ ಕಾರ್ ಹೊಂದಿರುವವರಿಗೆ ಗ್ಯಾಸ್ ಸಬ್ಸಿಡಿಯನ್ನು ತಡೆಹಿಡಿಯುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಯಾರ ಹೆಸರಿನಲ್ಲಿ ಕಾರ್ ರಿಜಿಸ್ಟರ್ ಆಗಿದೆ, ಅವರ ಕೆಲಸ ಕಾರ್ಯ, ವಿಳಾಸ ಸೇರಿದಂತೆ ಕಾರ್ ಮಾಲೀಕರ ಸಂಪೂರ್ಣ ಮಾಹಿತಿಯನ್ನು ಆರ್ ಟಿಒಯಿಂದ ಕಲೆ ಹಾಕಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಎರಡು ಮೂರು ಕಾರುಗಳನ್ನು ಹೊಂದಿರುವ ಬಹುತೇಕ ಮಂದಿ ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಇದೀಗ ಇಂತಹವರಿಗೆ ಗ್ಯಾಸ್ ಸಬ್ಸಿಡಿಯನ್ನು ಕಡಿತಗೊಳಿಸಿದರೆ ಕೋಟಿಗಟ್ಟಲೆ ಹಣ ಉಳಿತಾಯವಾಗಲಿದೆ ಎಂಬ ದೂರಾಲೂಚನೆಯಿಂದ ಈ ಕ್ರಮಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆಯಂತೆ.
ಒಂದು ವೇಳೆ ಕೇಂದ್ರ ಸರ್ಕಾರ ಗಂಭೀರವಾಗಿ ಇದನ್ನು ಜಾರಿಗೆ ತರಲು ಮುಂದಾದರೆ ಕಾರ್ ಹೊಂದಿರುವವರಿಗೆ ಗ್ಯಾಸ್ ಸಬ್ಸಿಡಿ ಸಿಗೋದಿಲ್ಲ.
ಸದ್ಯ ಗ್ಯಾಸ್ ಅನ್ನು ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಿದರೆ ನಂತರ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.