ಭಾರತದಲ್ಲಿ ಗೂಗಲ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲ್ಲೇ ಸಾಗುತ್ತಿರುವುದನ್ನು ಮನಗಂಡ ಗೂಗಲ್ ಇದೀಗ ನಮ್ಮ ಜನಕ್ಕೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.

ಯಾರ ಬಳಿ ಮಾಹಿತಿ ಕೇಳದೆ ಎಲ್ಲಿಂದ ಎಲ್ಲಿಗೆಬೇಕಾದರೂ ಸಾಗಬಹುದಾದ ಗೂಗಲ್ ಮ್ಯಾಪ್ ನಲ್ಲಿ ಇಷ್ಟು ದಿನ ಬಸ್, ಕಾರ್ ಮತ್ತು ವಾಕಿಂಗ್ ರೂಟ್ ಗಳನ್ನಷ್ಟೇ ತೋರಿಸಲಾಗುತ್ತಿತ್ತು. ಆದರೀಗ ಬೈಕ್ ನ್ಯಾವಿಗೇಶನ್ ಕೂಡ ಬಂದಿದ್ದು ಟೂವಿಲರ್ ಮಂದಿಗೆ ಮತ್ತಷ್ಟು ಸಹಕಾರಿಯಾಗಿದೆ.

ಸದಾ ಮೈನ್ ರೋಡ್ ನಲ್ಲಿ ಸಾಗಿ ಟ್ರಾಫಿಕ್ ಕಿರಿಕಿರಿ ಅನುಭವಿಸುವುದಕ್ಕೆ ಬದಲಾಗಿ ಗೂಗಲ್ ಮ್ಯಾಪ್ ಹಾಕಿಕೊಂಡು ಸಂದಿಗುಂದಿಯಲ್ಲಿ ಸಾಗಿ ತಮ್ಮ ಸ್ಥಳವನ್ನು ಅತಿ ಬೇಗ ಮತ್ತು ಸಂಚಾರದಟ್ಟಣೆಯಿಲ್ಲದೆ ತಲುಪಲು ಇದೀಗ ಬೈಕ್ ನ್ಯಾವಿಗೇಶನ್ ಸಹಕಾರಿಯಾಗಲಿದೆ. ಗೂಗಲ್ ಮ್ಯಾಪ್ ನ ಲೇಟೆಸ್ಟ್ ವರ್ಷನ್ google maps (v9.67.1) ಅನ್ನು ಡೌನ್ ಲೋಡ್ ಮಾಡಿಕೊಂಡರೆ ಅದರಲ್ಲಿ ಈ ಹೊಸ ಆಪ್ಷನ್ ಸಿಗಲಿದೆ.

RELATED ARTICLES  ಜಿಯೋ ಸರ್ಪೈಸ್ ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತಾ?

ಇಂಡಿಯಾದಲ್ಲಿ ಅತಿ ಹೆಚ್ಚು ಮಂದಿ ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ. ಇಷ್ಟು ದಿನ ಕಾರ್ ನಲ್ಲಿ ಓಡಾಡುವವರು ಬಳಸುತ್ತಿದ್ದರು. ಆದರೆ ಇದನ್ನು ಇನ್ನಷ್ಟು ಮಂದಿಗೆ ರೀಚ್ ಮಾಡಿಸಬೇಕೆಂಬ ದೃಷ್ಟಿಯಿಂದ ಬೈಕ್ ನ್ಯಾವಿಗೇಶನ್ ಆರಂಭಿಸಲಾಗಿದೆ. ಇದರಿಂದ ಮಧ್ಯಮವರ್ಗದ ಬಹಳಷ್ಟು ಮಂದಿ ಗೂಗಲ್ ಮ್ಯಾಪ್ ಅನ್ನು ಹೆಚ್ಚು ಹೆಚ್ಚು ಬಳಸಲಿದ್ದಾರೆ ಎಂಬ ಆಲೋಚನೆಯಿಂದ ಗೂಗಲ್ ಮತ್ತೊಂದು ಹೆಜ್ಜೆ ಇಟ್ಟಿದೆ.

RELATED ARTICLES  ಇಂಡಿಯಾಗೂ ಬಂತು ಅಪಾಚಿ ಆರ್ ಆರ್ 310

ಒಟ್ಟಿನಲ್ಲಿ ಟೆಕ್ನಾಲಜಿ ಬೆಳೆದಂತೆಲ್ಲಾ ಯಾರ ನೆರವಿಲ್ಲದೆ ಅತಿ ಸುಲಭ ಮತ್ತು ಕರಾರುವಕ್ಕಾಗಿ ತಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಗೂಗಲ್ ಸಾಕಷ್ಟು ನೆರವಾಗುತ್ತಿರುವುದಂತೂ ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಗೂಗಲ್ ಇನ್ನೂ ಏನೇನನ್ನು ಪರಿಚಯಿಸುತ್ತದೋ ಕಾದು ನೋಡಬೇಕು.

ಬೈಕ್ ನ್ಯಾವಿಗೇಶನ್ ನಿಂದ ಬೆಂಗಳೂರು, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಸಂಚರಿಸುವವರಿಗೆ ಅದರಲ್ಲೂ ಮಾರ್ಕೆಟಿಂಗ್ ಕೆಲಸ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ.