ಶಿರಸಿ: ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಡಿ.9 ರಂದು ಮುಂಜಾನೆ 10.00 ಗಂಟೆಗೆ ವಿಕಲಚೇತನರ ಅದಾಲತ್‍ನ್ನು ಸಂಘಟಿಸಲಾಗಿದ್ದು, ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುವ ದಿಶೆಯಲ್ಲಿ ಹಮ್ಮಿಕೊಂಡಂತಹ ಅದಾಲತ್ ಕಾರ್ಯಕ್ರಮದಲ್ಲಿ ವಿಕಲಚೇತನರು ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ನಗರಸಭೆ ಶಿರಸಿ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದ್ದು ಮುಂಜಾನೆ 9.30 ರಿಂದ ಸ್ಥಳದಲ್ಲಿಯೇ ನೋಂದಣಿ ಕಾರ್ಯಕ್ರಮ ಜರುಗಲಿದೆ.

RELATED ARTICLES  ಶಿಕ್ಷಕರು/ಉಪನ್ಯಾಸಕರು ಬೇಕಾಗಿದ್ದಾರೆ.

ಆದಾಲತ್‍ನಲ್ಲಿ ಸ್ಥಳದಲ್ಲಿಯೇ ಅವಶ್ಯವುಳ್ಳವರಿಗೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸುವುದು, ವಿಕಲಚೇತನರಿಗೆ ದೊರಕುವ ಸಂಪೂರ್ಣ ಸರ್ಕಾರದ ಯೋಜನೆಯ ಮಾಹಿತಿ ಬಿತ್ತರಿಸುವುದು, ವಿಕಲಚೇತನರಿಗೆ ಇರುವ ಕಾನೂನುನಿನ ಪೂರಕ ಅಂಶವನ್ನು ಬಿತ್ತರಿಸುವುದು, ವಿಕಲಚೇತನರ ಕುಂದು ಕೊರತೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರಕ್ಕೆ ನಿರ್ದೇಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

RELATED ARTICLES  ಶ್ರೀ ದೇವಿ ಪಾರಾಯಣ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮ

ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುವ ದಿಶೆಯಲ್ಲಿ ರಾಜ್ಯದಲ್ಲಿಯೇ ಮಾದರಿ ರೀತಿಯಲ್ಲಿ ಜರುಗಲಿರುವ ಅದಾಲತ್‍ನಲ್ಲಿ ಉನ್ನತ ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.