ಮುಂಡಗೋಡ; ಊರಿಗೆ ಬಂದ ನಾಡಿನ ದೊರೆಗೆ ಮನವಿ ಸಲ್ಲಿಸಲೆಂದು ಸಾಲುಗಟ್ಟಿ ನಿಂತಿದ್ದ ಅಂಗವಿಕಲರ ಮನವಿ ಸ್ವೀಕರಿಸದೇ ಹೋಗಿದ್ದರಿಂದ ದಲಿತ ರಕ್ಷಣಾ ವೇಧಿಕೆ ರಾಜ್ಯ ಅಧ್ಯಕ್ಷ ಚಿದಾನಂದ ಹರಿಜನ, ಮತ್ತು ತಾಲೂಕ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಭೋವಿ ಹಾಗೂ ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

RELATED ARTICLES  ಮಳೆಗೆ ಅಂಕೋಲಾದಲ್ಲಿ ಅಲ್ಲೋಲ ಕಲ್ಲೋಲ..!

ಮುಂಡಗೋಡಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆಯ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಿಲ್ಲ ಎಂದು ಅಂಗ ಊನರು, ವಿಧವೆಯರು, ವೃದ್ದರು ರಾಜ್ಯದ ಮುಖ್ಯಮಂತ್ರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಉದ್ದೇಶದಿಂದ ಬೆಳಗ್ಗಿನಿಂದ ತಿಂಡಿ ತಿರ್ಥವಿಲ್ಲದೆ ಸುಡು ಬಿಸಿಲಿನಲ್ಲಿ ಕಾಯ್ದು ನಿಂತರೂ ಕೂಡ ಮುಖ್ಯಮಂತ್ರಿಗಳಿಗೆ ಬೇಟಿಯಾಗಿ ಮನವಿ ಸಲ್ಲಿಸಲು ಅಧಿಕಾರಿಗಳು ಅವಕಾಶ ನೀಡದೆ ವಂಚಿಸಿದ್ದಾರೆಂದು ತಹಸೀಲ್ದಾರ ಹಾಗೂ ಪೊಲೀಸ ಇಲಾಖೆ ವಿರುದ್ದ ಘೊಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಜಾಕೋಬ ಬಳ್ಳಾರಿ ಮುಂತಾವರು ಉಪಸ್ಥಿತರಿದ್ದರು.

RELATED ARTICLES  ಯುವಕರು ವಾಟ್ಸಾಪ್, ಫೇಸ್ಬುಕ್ ಎನ್ನದೆ ಕಲೆಯ ಕಡೆಗೆ ಬರಬೇಕು : ರೂಪಾಲಿ ನಾಯ್ಕ