ಹೊನ್ನಾವರ : ಮೊನ್ನೆ ಮೊನ್ನೆ ನಡೆದ ಚಂದಾವರ ಗಲಬೆ ಮಾಸುವ ಮುನ್ನವೇ ಮತ್ತೆ ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣಾ ಸೃಷ್ಠಿಯಾಗಿತ್ತು. ಎರಡು ಕೋಮುಗಳ ನಡುವೆ ನಡೆದ ಕ್ಷುಲ್ಲಕ ಕಾರಣದ ಜಗಳ ಸಂಪೂರ್ಣ ಹೊನ್ನಾವರವನ್ನೇ ಸೇಡಿನ ಬೆಂಕಿಯಿಂದ ಸುಡುವಂತೆ ಮಾಡಿತ್ತು.
ಹೊನ್ನಾವರದಲ್ಲಿ ಬುಧವಾರ ರಾತ್ರಿ ನಡೆದ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟದಿಂದ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತು ಅಲ್ಲಿಯೇ ನಿಲ್ಲಿಸಿರುವ ಪ್ರಯಾಣಿಕರ ಕೊಂಡೊಯ್ಯುವ ಟೆಂಪೋ ವಾಹನವನ್ನು ಕಲ್ಲಿನಿಂದ ಹೊಡೆದು ಸಂಪೂರ್ಣ ಜಖಂ ಮಾಡಲಾಗಿದೆ. ಮತ್ತು ರಕ್ಷಣೆಗೆ ಆಗಮಿಸಿದ ಪೋಲಿಸ್ ವಾಹನದ ಮೇಲೆ ಕೂಡ ಕಲ್ಲು ಪ್ರಯೋಗ ಮಾಡಿದ್ದಾರೆ ಇದರಿಂದ ವಾಹನದ ಗಾಜು ಪುಡಿ ಪುಡಿಯಾಗಿದೆ. ಜೊತೆಗೆ ವಾಹನದ ಮೇಲಿರುವ ಒಂದು ಕೋಮಿನ ದೇವರ ಭಾವಚಿತ್ರವನ್ನು ಕೂಡ ಹರಿದು ತಮ್ಮ ವಿಕೃತ್ತ ಬುದ್ದಿ ಪ್ರದರ್ಶಿಸಿದ್ದಾರೆ. ಈ ಗಲಬೆಯಲ್ಲಿ ಒಬ್ಬ ಗಂಬೀರ ಗಾಯಗೊಂಡಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.
ಹೊನ್ನಾವರದಲ್ಲಿ ರಾತ್ರಿಯಾಗುತ್ತಿದ್ದಂತೆ ಗಲಭೆ ಸುರುವಾಗಿದ್ದು ಸಾರ್ವಜನಿಕರ ಎದೆ ಜಲ್ಲೆನಿಸಿತ್ತು. ಎಲ್ಲಿ ನೊಡಿದ್ರು ಹೊಡಿ,ಬಡಿ ಎನ್ನುವ ಮಾತುಗಳೇ ಕೇಳಿಬರುತಿತ್ತು. ನೋಡು ನೋಡುತ್ತಲೆ ಮಾನವಿಯತೆಯನ್ನೆ ಮರೆತು ಸಿಕ್ಕ ಸಿಕ್ಕವರ ಮೇಲೆ ಕಲ್ಲಿನಿಂದ ದೊಣ್ಣೆಯಿಂದ ಪ್ರಹಾರ ಮಾಡಲಾಗುತ್ತಿತ್ತು. ಈ ಮೂಲಕ ಹೊನ್ನಾವರ ಪಟ್ಟಣ ಸಂಪೂರ್ಣ ರೌಡಿಗಳ ರಾಜ್ಯದಂತೆ ಮಾರ್ಪಟ್ಟಿದ್ದು ಮಾತ್ರ ಬೇಸರದ ಸಂಗತಿಯಾಗಿತ್ತು. ಶಾಂತಿಯನ್ನು ಕ್ಷಣಕಾಲ ಕಾಪಾಡಿಕೊಳ್ಳಬಹುದಿತ್ತೇನೋ ಎಂಬ ಬಯಕೆ ಜನರದ್ದು.
ಮಾನ್ಯ ಮುಖ್ಯಮಂತ್ರಿಗಳು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸಿದ ಪರಿಣಾಮ ಪೋಲಿಸ ಇಲಾಖೆ ಮುಖ್ಯಮಂತ್ರಿಗಳ ಸುರಕ್ಷತೆಗೆ ಗಮನ ಹರಿಸಿತ್ತು. ಆದ್ದರಿಂದ ಹೆಚ್ಚಿನ ಪೋಲಿಸ ಸಿಬ್ಬಂದಿಗಳು ಕೂಡ ಇರದ ಕಾರಣ ಗಲಬೆಗೆ ಬ್ರೇಕ್ ಹಾಕುವರು ಇರಲಿಲ್ಲ ಎಂಬುದು ಸ್ಥಳೀಯರ ಊಹೆ. ಆದರೂ ಕೊನೆಗೆ ಆಗಮಿಸಿದ ಪೋಲಿಸ ಇಲಾಖೆ ವಾತಾವರಣವನ್ನು ಸರಿದೂಗಿಸಲು ಪ್ರಯತ್ನಿಸಿದೆ, ಆದರೆ ಈ ವೇಳೆ ಪೋಲಿಸ ಇಲಾಖೆಯ ಮೇಲೆ ಕೂಡ ದಾಳಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡ ಪೋಲಿಸರು ಕೊನೆಗೆ ಎರಡು ಗುಂಪಿನ ಸುಮಾರು 70 ಕ್ಕೂ ಹೆಚ್ಚು ಮಂದಿಯನ್ನು ಬಂದಿಸಿದರು.
ಹೊನ್ನಾವರ ಕೋಮುಗಲಭೆಯಿಂದಾಗಿ ಬೂದಿಮುಚ್ಚಿದ ಕೆಂಡದಂತಾಗಿದೆ. ಎಲ್ಲಿ ನೋಡಿದ್ರು ಖಾಕಿ ಪಡೆಗಳ ಸರ್ಪಗಾವಲು ಕಣ್ಣಿಗೆ ಕಾಣುತ್ತಿದೆ. ಘಟನೆ ಖಂಡಿಸಿ, ಹಿಂದೂಸಂಘಟನೆಗಳ ಮುಖಂಡರು ಹೊನ್ನಾವರ ಬಂದ್‍ಗೆ ಕರೆನೀಡಿದ್ದರು, ಈ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಎಲ್ಲಾ ಅಂಗಡಿಕಾರರು ಸಂಪೂರ್ಣವಾಗಿ ಸ್ವ ಇಚ್ಛೆಯಿಂದ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದ ದೃಶ್ಯಕಂಡುಬಂತು. ಸುರಕ್ಷತಾ ದೃಷ್ಟಿಯಿಂದ ಪಟ್ಟಣದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು..
ಒಂದಡೆ ತಾಲೂಕಿನ ಹಿಂದೂ ಕಾರ್ಯಕರ್ತರು, ಮೇಸ್ತ ಸಮಾಜದ ಮುಖಂಡರು, ಟೆಂಪೋ ಯುನಿಯನ್ ಅಧ್ಯಕ್ಷರು., ಮಾಜಿ ಶಾಸಕ ದಿನಕರ ಶೆಟ್ಟಿ, ಬೆಜೆಪಿ ಮುಖಂಡ ನಾಗರಾಜ್ ನಾಯಕ ತೊರ್ಕೆ ಸೇರಿದಂತೆ ಅನೇಕರು ಬಂಧಿರತರನ್ನು ಬಿಡುಗಡೆಗೊಳಿಸುವಂತೆ ಪೊಲೀಸರನ್ನು ಆಗ್ರಹಿಸಿದರು. ಅಲ್ಲದೆ, ಬೆಳಗಿನ ಜಾವ ಮನೆಗೆ ನುಗ್ಗಿ ಬಂಧಿಸಿರುವ ಪೊಲೀಸರ ಕ್ರಮಕ್ಕೆ ಎಲ್ಲರೂ ಆಕ್ರೋಶವ್ಯಕ್ತಪಡಿಸಿದ್ದಾರೆ. ಬಂಧಿತರಲ್ಲಿ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದವರಾಗಿದ್ದು, ಅತಂಹವರನ್ನು ಬಂಧಿಸಿರುವುದು ಯಾಕೆ? ಎಂಬುದು ಸಾರ್ವಜನಿಕರ ವಾದ. ಈ ಬಗ್ಗೆ ಮಾಜಿ ಶಾಸಕ, ಬಿಜೆ,ಪಿ ಮುಖಂಡ ದಿನಕರ ಶೇಟ್ಟಿ ಹಾಗೂ ನಾಗರಾಜ ನಾಯಕ ತೊರ್ಕೆ ಸತ್ವಾಧಾರ ನ್ಯೂಸ್ ಜೊತೆಗೆ ಮಾತನಾಡಿ ಪೋಲಿಸ್ ಇಲಾಖೆಯ ನಡೆ ಮತ್ತು ಹಿಂದೂ ಕಾರ್ಯಕರ್ತರ ಮೇಲಾದ ಹಲ್ಲೆಯನ್ನು ಖಂಡಿಸಿದ್ರು.
ಒಟ್ಟಾರೆ ಈ ಗಲಾಟೆಯಲ್ಲಿ ಅನೇಕರು ಬಂಧಿತರಾಗಿದ್ದು ಅದರಲ್ಲಿ ಎರಡು ಕೋಮಿನವರು ಇದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಈ ಎಲ್ಲಾ ಹಲ್ಲೆಗೆ ಕಾರಣಿಕರ್ತರನ್ನು ಗುರುತಿಸಿ ಅವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು,. ಯಾವುದೇ ಅಮಾಯಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ ಮತ್ತು ಕರ್ತವ್ಯ.. ಅಲ್ಲದೆ, ಈ ಗಲಾಟೆಗೆ ಪೂರ್ವ ನಿಯೋಜಿತ ಸಂಚೇ ? ಎನ್ನುವುದು ಕೂಡ ತನಿಖೆಯಾಗಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಾಂತಿ ಕಾಪಾಡಲು ಹರ ಸಾಹಸ ಪಟ್ಟ ಪೋಲೀಸರ ಕಷ್ಟ ಮಾತ್ರ ಹೇಳತೀರದು. ಅದೇನೇ ಇದ್ದರೂ ಶಾಂತಿಗೆ ಭಂಗ ಬಾರದಿರಲಿ. ಎಲ್ಲರೂ ಒಟ್ಟಾಗಿ ಸಹೋದರತ್ವದ ಭಾವನೆಯಿಂದ ಬಾಳುವಂತಾಗಲಿ ಎಂಬುದೇ ಎಲ್ಲರ ಆಶಯ. ಅದುವೇ ನಮ್ಮ ಆಶಯ..