ಹೊನ್ನಾವರ : ನಿನ್ನೆ ನಡೆದ ಘಟನೆಗಳಲ್ಲಿ ಕಾಣೆಯಾದ ಪರೇಶ್ ಮೇಸ್ತ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಜನತೆಯ ಆತಂಕಕ್ಕೆ ಕಾರಣವಾಗಿದೆ.ಶವ ಪರೀಕ್ಷೆ ಹಾಗೂ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ.

ಶನಿವಾರ ಗಲಭೆಯಲ್ಲಿ ನಾಪತ್ತೆಯಾದ ಪರೇಶ್
ಹೊನ್ನಾವರದ ಶನಿ ದೇವಸ್ಥಾನದ ಹಿಂದುಗಡೆಯ ಶೆಟ್ಟಿ ಕೆರೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES  ಭಾರತೀಯ ಆಸ್ಮಿತೆಯನ್ನು ಒಪ್ಪುವವರಲ್ಲಿ ಮತ ಯಾಚಿಸುವೆ : ಅನಂತ ಕುಮಾರ್ ಹೆಗಡೆ.

ನಿನ್ನೆ ಇಂದ ನಡೆದ ಕೋಮು ಗಲಬೆಯ ಸನ್ನಿವೇಶದಲ್ಲಿ ಈತ ನಾಪತ್ತೆಯಾಗಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.

ಪೋಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು. ಪರಿಸ್ಥಿತಿ ನಿಯಂತ್ರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES  ಹೆಗಡೆಯಲ್ಲಿ ಕಾರ್ತಿಕ ದೀಪೋತ್ಸವ ನಿಮಿತ್ತ ಸಹಸ್ರ ದೀಪೋತ್ಸವ - ಡಿಸೆಂಬರ್ 7ಕ್ಕೆ

ಜನತೆ ಶಾಂತಿ ಬಯಸುತ್ತಿದ್ದು ಶಾಂತ ರೀತಿಯಲ್ಲಿ ಎಲ್ಲರೂ ವರ್ತಿಸಿ ಎಂಬುದೇ ನಮ್ಮ ಮನವಿ.