ಶಿರಸಿ: ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಪ್ಪುಗೆಯ ಸ್ವಾಗತ ಸಿಕ್ಕಿತು. ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್ ನಲ್ಲಿ ಇಳಿದ ಸಿದ್ದರಾಮಯ್ಯನವರನ್ನು ತಾಲೂಕು ಪಂಚಾಯತಿ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ ಹಾಗೂ ನಗರಸಭೆಯ ಪ್ರಭಾರಿ ಅಧ್ಯಕ್ಷೆ ಅರುಣಾ ವೆರ್ಣೇಕರ ಅಪ್ಪಿಕೊಂಡು ಸ್ವಾಗತಿಸಿದರು.
ಸಿದ್ದರಾಮಯ್ಯರ ಎರಡು ಬದಿ ನಿಂತು ಅಪ್ಪಿ ಫೋಟೋಗೆ ಪೋಸ್ ಕೊಟ್ಟಿದ್ದು ವಿಶೇಷವಾಗಿತ್ತು. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶ್ರೀಲತಾ ಅವರು ಸಿದ್ದರಾಮಯ್ಯನವರು ಹಾಗೂ ಎಚ್.ಸಿ.ಮಹದೇವಪ್ಪ ಅವರು ಹಿಂದಿನಿಂದಲೂ ನನ್ನ ಪತಿಗೆ ಆಪ್ತರು ಎಂದು ತಿಳಿಸಿದರು. ಸಿದ್ದರಾಮಯ್ಯನವರು ನನಗೆ ತಂದೆ ಸಮಾನ ಅದರಿಂದಲೂ ಭಾವುಕರಾಗಿ ಅವರನ್ನು ತಪ್ಪಿಕೊಂಡೆ ಎಂದರು.
ಈ ಹಿಂದೆ ಮಂಗಳೂರಿನ ಮಹಿಳಾ ಮೇಯರ್ ಗೆ ಸಿದ್ದರಾಮಯ್ಯನವರು ತಮಾಷೆಯಾಗಿ ಕರಾಟೆ ಪಂಚ್ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಮತ್ತೊಂದೆಡೆ ವೇದಿಕೆ ಮೇಲೆ ಸಿದ್ದರಾಮಯ್ಯನವರ ಸಮುದಾಯದ ಮಹಿಳೆ ಅವರಿಗೆ ಮುತ್ತು ನೀಡಿದ್ದು ಸುದ್ದಿಗೆ ಗ್ರಾಸವಾಗಿತ್ತು.