ಹೊನ್ನಾವರ : ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು. ಭಾಗಿಯಾದ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಿ ಎಂದು ಎಸ್ಪಿಯವರಿಗೆ ಸೂಚಿಸಿದ್ದೇನೆ ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದ್ದಾರೆ. ಹೊನ್ನಾವರದಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಪರೇಶ ಮೇಸ್ತ ಘಟನೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದರು.

ಪರೇಶ ಮೇಸ್ತ ಕುಟುಂಬದವರಿಗೆ ಸಾಂತ್ವಾನ ಹೇಳಿದ ಅವರು ಪರೇಶ ಮೇಸ್ತ ಸಾವಿನ ಕುರಿತು ವಿಶಾಧ ವ್ಯಕ್ತಪಡಿಸಿದರು. ತಾನೂ ಒಬ್ಬ ತಾಯಿಯಾಗಿ ನೋವಾಗಿದೆ ಎಂದ ಅವರು ಪರೇಶ ಮೇಸ್ತ ಸಾವಿನ ಕುರಿತಾಗಿ ಭಾವುಕರಾದರು. ಹೊನ್ನಾವರ ಮೊದಲಿನಿಂದಲೂ ಶಾಂತವಾಗಿರುವ ತಾಲೂಕು. ಇಂಥ ಘಟನೆ ನಡೆಯಬಾರದಿತ್ತು ಎಂದು ಅವರು ತಿಳಿಸಿದರು.

RELATED ARTICLES  ಚಳುವಳಿಯಿಂದಷ್ಟೇ ಬೋಧಕರ ಹಿತರಕ್ಷಣೆ ಸಾಧ್ಯ: ಕುಬೇರಪ್ಪ

ತಾನು ಶಾಸಕಿಯಾಗಿ ಐದು ವರ್ಷ ಆಗುತ್ತ ಬಂತು. ಈ ತನಕ ಇಂಥ ಘಟನೆ ಆಗಿರಲಿಲ್ಲ. ಘಟನೆಯಲ್ಲಿ ಹುಡುಗ ಪರೇಶ ಮೇಸ್ತ ಸಾವನ್ನಪ್ಪಿದ್ದು ದುರಂತ. ಮೃತಪಟ್ಟ ಹುಡುಗನ ತಾಯಿಯನ್ನು ನಾನೂ ಒಬ್ಬ ತಾಯಿಯಾಗಿ ಮಾತಾಡಿಸಿದ್ದೇನೆ ಎಂದರು.

RELATED ARTICLES  ಮತ್ಸಮಹಿಳಾ ಸ್ವಾವಲಂಬಿ ಯೋಜನೆಯ ಚೆಕ್ ವಿತರಣೆ

ಈ ಸಂದರ್ಭದಲ್ಲಿ ಮಾಧ್ಯಮದ ಮೂಲಕ ಜನತೆಗೆ ವಿಷಯ ಮುಟ್ಟಿಸಿದ ಅವರು. ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು. ಭಾಗಿಯಾದ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಿ ಎಂದು ಎಸ್ಪಿಯವರಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ವಿನಾಯಕ ಶೆಟ್ಟಿ ಹಾಗೂ ಇನ್ನಿತರರು ಹಾಜರಿದ್ದರು.