ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಯುವಕ ಸಮುದ್ರಪಾಲಾದ ಘಟನೆ.
ಅಂಕೋಲಾ : ಸಮುದ್ರದ ತೀರದಲ್ಲಿ ಬಂಡೆಯ ಮೇಲೆ ನಿಂತು ಸೇಲ್ಪಿ ಪೋಟೊ ತೆಗಯುತ್ತಿರುವ ಸಂದರ್ಭದಲ್ಲಿ ಬಾರಿ ಅಲೆಗೆ ಸಿಲುಕಿ ಸಮುದ್ರದಲ್ಲಿ ಕಾಲು ಜಾರಿಬಿದ್ದು ಯುವಕನೋರ್ವ ಕಣ್ಮರೆಯಾದ ಘಟನೆ ಇಲ್ಲಿಯ ಹೊನ್ನೇಬೈಲ್ ಸಮುದ್ರದಲ್ಲಿ ಬಾನುವಾರ ಸಂಜೆ ನಡೆದಿದೆ.
ಕುಮಟಾ ಬಗ್ಗೊಣ ನಿವಾಸಿಯಾದ ಗುರುದರ್ಶನ ನಾಗೇಶ ಶೇಟ(21) ಎಂಭಾತನೆ ಸಮುದ್ರ ಪಾಲಾದ ಯುವಕ. ಈತನು ಇತ್ತಿಚೆಗಷ್ಟೆ ಬಿ.ಕಾಂ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾನೆ.
ಈತನು ತನ್ನ ಸ್ನೇಹಿತರೊಂದಿಗೆ (ರಾಹುಲ್ ಶೇಟ್, ಅಕ್ಷಯ ಬಾಳೇರಿ, ಹಾಗೂ ಪ್ರಶಾಂತ ಗಾವಡಿ) ಕುಮಟಾದಿಂದ ಸಂಜೆ 5 ಗಂಟೆಯ ಹೊತ್ತಿಗೆ ಹೊನ್ನೆಬೈಲ್ ಸಮುದ್ರಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ಸಂದರ್ಭದಲ್ಲಿ ಸ್ನೇಹಿತರೊಡಗೂಡಿ ಸೇಲ್ಪಿ ಪೋಟೊ ತೆಗೆಯುತ್ತಿರುವಾಗ ಗುರುದರ್ಶನ ಕಾಲು ಜಾರಿ ಸಮುದ್ರಕ್ಕೆ ಬಿದ್ದನ್ನೆಂದು ತಿಳಿದು ಬಂದಿದೆ.
ಈತನ ಜೊತೆಯಲ್ಲಿ ಇನ್ನೂ ಮೂವರು ಸ್ನೇಹಿತರು ಬಂದಿರುತ್ತಾರೆ. ಘಟನೆಯ ಸುದ್ದಿ ತಿಳಿಯುತ್ತಲೆ ಪಾಲಕರು ಸ್ಥಳಕ್ಕೆ ಬಂದಿರುತ್ತಾರೆ. ಪೊಲೀಸರು ಸ್ಥಳಕ್ಕೆ ದಾವಿಸಿ ಕಣ್ಮರೆಯಾದ ಯುವಕನ ಹುಡುಕಾಟ ನಡೆಸುತ್ತಿದ್ದಾರೆ. ಸಿಪಿಐ ಬಸಪ್ಪ ಬುರ್ಲಿ ನೇತೃತ್ವದಲ್ಲಿ ಹುಡುಕಾಟ ನಡೆಯುತ್ತಿದೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.