ಮೂಡಲಗಿ: ವಿದ್ಯಾರ್ಥಿ ಜೀವನದಲ್ಲಿಯೇ ಭಾಷೆಗಳ ಕುರಿತು ಪ್ರಭುತ್ವ ಸಾಧಿಸಲು ಅತೀ ಹೆಚ್ಚು ಅವಕಾಶಗಳಿರುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯು ಅತ್ಯಾವಶ್ಯಕವಾಗಿದ್ದು ಮಾತೃ ಭಾಷೆಯ ಕಲಿಕೆಯೊಂದಿಗೆ ಇಂಗ್ಲೀಷ ಅಧ್ಯಯನ ಅವಶ್ಯಕವಾಗಿದೆ ಎಂದು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಹೇಳಿದರು.
ಅವರು ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಎಸ್ ಕಲ್ಯಾಣ ಮಂಟಪದಲ್ಲಿ ಜರುಗಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ದಾರವಾಡದ ವರದಶ್ರೀ ಫೌಂಡೇಷನ ಸಹಯೋಗದೊಂದಿಗೆ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಉಪನ್ಯಾಸ ಮಾಲಿಕೆ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯರಿಂದ ಕೊಡಲ್ಪಟ್ಟ ಸುಲಭ ಗಣಿತ, ಸರಳ ಗಣಿತ ಕ್ಯಾಲಂಡರ್ ಬಿಡುಗಡೆಗೋಳಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿರುವ ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಮಕ್ಕಳಿಗೂ ಉಚಿತವಾಗಿ ಇಂಗ್ಲೀಷ ಕಾರ್ಯಾಗಾರಗಳನ್ನು ಏರ್ಪಡಿಸಿರುವದು ಮೆಚ್ಚುವ ಕಾರ್ಯವಾಗಿದೆ. ಸುಲಭ ರೀತಿಯಲ್ಲಿ ಅಧ್ಯಯನ ಮಾಡುವ ವಿಧಾನ ಹಾಗೂ ಅರ್ಥೈಸುವ ಕಾರ್ಯಚಟುವಟಿಕೆಗಳನ್ನು ವಿದ್ಯಾರ್ಥಿಗಳು ಮನನ ಮಾಡಿಕೊಂಡು ಅಧ್ಯಯನದಲ್ಲಿ ತೋಡಗ ಬೇಕು. ರಾಜ್ಯ ಮಟ್ಟದ ಇಂಗ್ಲೀಷ ಸಂಪನ್ಮೂಲ ವ್ಯಕ್ತಿ ಶಾಂತಿ ದೇಸಾಯಿಯವರ ಬೋಧನಾ ಕಾರ್ಯ ಉತ್ತಮವಾಗಿದ್ದು ಅವರು ಹೇಳುವ ಕಲಿಕಾ ಚಟುವಟಿಕೆಗಳನ್ನು ಸ್ಮರಣೆಯಲ್ಲಿಟ್ಟುಕೊಂಡು ಒಳ್ಳೇಯ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕೆಂದು ನುಡಿದರು.
ಬಿ.ಇ.ಓ ಎ.ಸಿ ಗಂಗಾಧರ ಮಾತನಾಡಿ, ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಮಕ್ಕಳಿಗೂ ಇಂಗ್ಲೀಷ ಭಾಷೆಯ ಕುರಿತು ಇರುವ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದ್ದು, ದಾರವಾಡದ ವರದಶ್ರೀ ಫೌಂಡೇಷನದವರು ಉಚಿತವಾಗಿ ನಮ್ಮ ವಲಯಕ್ಕೆ ನೀಡುತ್ತಿರುವದು ಶ್ಲಾಘನೀಯವಾಗಿದೆ. ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಬಿ.ಎಲ್.ಜೆ ಟ್ರಸ್ಟವತಿಯಿಂದ ವಲಯದ 6200 ಮಕ್ಕಳಿಗೆ ಸುಲಭ ಗಣೀತ ಸರಳ ಗಣೀತ ಕ್ಯಾಲೆಂಡರನ ಉಪಯೋಗವನ್ನು ವಲಯದ ವಿದ್ಯಾರ್ಥಿಗಳು ಪಡೆದುಕೋಳ್ಳ ಬೇಕೆಂದರು.
ವರದಶ್ರೀ ಫೌಂಡೇಷನದ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ತಂದೆ ತಾಯಿಯವರಿಗೆ ಕೃತಜ್ಞರಾಗಿ ತಮ್ಮ ತಮ್ಮ ಜೀವನವನ್ನು ವ್ಯರ್ಥ ಕಾಲಹರಣ ಮಾಡದೆ ದೇಶದ ಸತ್ವಯುಕ್ತ ಪ್ರಜೆಗಳಾಗಬೇಕೆಂದರು.
ಶಾಂತಿ ದೇಸಾಯಿಯವರಿಂದ ನಾಗನೂರ, ಕಲ್ಲೋಳ್ಳಿ ಸಮೂಹ ವ್ಯಾಪ್ತಿಯ ಮಕ್ಕಳಿಗೆ ಇಂಗ್ಲೀಷ ಉಪನ್ಯಾಸ ಮಾಲಿಕೆ ಜರುಗಿತು.
ಕಾರ್ಯಕ್ರಮದಲ್ಲಿ ಮೇಘಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ವರದಶ್ರೀ ಫೌಂಡೇಷನ ಕಾರ್ಯದರ್ಶಿ ಸಿದ್ದು ಶಿರಸಂಗಿ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಪಿ.ಜಿ ಪಾಟೀಲ್, ಮುರಾರ್ಜಿ ಪ್ರಾಚಾರ್ಯ ಆರ್.ಬಿ ಗಂಗರಡ್ಡಿ, ಮುಖ್ಯೋಪಾದ್ಯಾಯರಾದ ಎಸ್.ಕೆ ಚಿಪ್ಪಲಕಟ್ಟಿ, ಸಂದ್ಯಾ ಪಾಟೀಲ್, ಅಶೋಕ ನೇಸರಗಿ, ಬಸು ನಾಯಿಕ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.