ಕುಮಟಾ : ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ಕುಮಟಾದ ಗಿಬ್ ಸರ್ಕಲ್ ನಿಂದ ಮೆರವಣಿಗೆ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಸ್ತ ಹಿಂದೂ ಬಾಂದವರು ಈ ಹಾಗೂ ಬಿಜೆಪಿ ಘಟಕ ಕುಮಟಾ ಹತ್ಯೆಯನ್ನು ಖಂಡಿಸಿ ಪರೇಶ ಸಾವಿನ ತನಿಖೆ ನಡೆಯಬೇಕು ಮತ್ತು ಪರೇಶ ಕುಟುಂಬಕ್ಕೆ ನ್ಯಾಯ ಒದಗಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ನೀಡಿದರು.

RELATED ARTICLES  ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದ ಬಸ್.

ಇತ್ತಿಚಿಗೆ ನಗರದಲ್ಲಿ ನಡೆದ ಗಲಭೆಯಲ್ಲಿ ಕಾಣೆಯಾಗಿದ್ದ ಎನ್ನಲಾದ ಪರೇಶ್ ಮೆಸ್ತ ಎಂಬ ಯುವಕನ ಶವ ನಗರದ ಶನಿ ದೇವಸ್ಥಾನದ ಹಿಂದಿರುವ ಶೆಟ್ಟಿ ಕೆರೆಯಲ್ಲಿ ಪತ್ತೆಯಾಗಿದೆ.ಇದು ಪೂರ್ವ ನಿಯೋಜಿತ ಕೃತ್ಯವೇ ಎಂಬ ಅನುಮಾನ ಬರುತ್ತಿದೆ.

RELATED ARTICLES  ಹೊನ್ನಾವರ ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ

IMG 20171209 WA0008

ಹಿಂದುಗಳ ಮೇಲಿನ ಆಕ್ರಮಣ ಖಂಡನೀಯ ಹಿಂದುತ್ವ ಪ್ರತಿಪಾದಕರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದನ್ನು ಖಂಡಿಸುತ್ತೇವೆ ಎಂದು ಸರಕಾರದ ವಿರುದ್ಧ ಬಿಜೆಪಿ ಮುಖಂಡರು ಹರಿಹಾಯ್ದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ, ದಿನಕರ ಶೆಟ್ಟಿ, ಸೂರಜ ನಾಯ್ಕ ಸೋನಿ, ಗಾಯತ್ರಿ ಗೌಡ ಹಾಗೂ ಇನ್ನಿತರರು ಹಾಜರಿದ್ದರು.