ಉತ್ತರ ಕನ್ನಡ : ಗಲಭೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತ ಅವರ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಹಾಗೂ‌ ರಾಜ್ಯ ಸರ್ಕಾರದ ವಿರುದ್ಧ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ನಗರದ ಸುತ್ತ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಜೊತೆ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಕೈಜೋಡಿಸಿದ್ದು ಪ್ರತಿಭಟನೆ ಉಗ್ರ ಸ್ವರೂಪ ಪಡೆಯಿತು.

ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ನಗರದಲ್ಲಿ ಹಾಕಲಾಗಿದ್ದ ಕಾಂಗ್ರೆಸ್ ನ ಬಾವುಟಗಳನ್ನು ಕಿತ್ತೆಸೆದ ಕಾರ್ಯಕರ್ತರು ಸಾವು ನ್ಯಾಯವೇ? ಎಂದು ಸರಕಾರವನ್ನು ಪ್ರಶ್ನಿಸಿದರು.

ಕಂಡವರ ಮನೆಯ ಬೆಳಕನ್ನು ಆರಿಸಿ, ಹೆತ್ತೊಡಲ ಪುತ್ರ ಶೋಕವನ್ನು ನಿರಂತರವಾಗಿ ಉರಿಸಿ, ಅಪ್ಪನಾಗಿದ್ದರೂ ಪರನಾರಿಯನಪ್ಪಿ ಪೋಸು ಕೊಟ್ಟು, ಹಾದಿತಪ್ಪಿಸಲು ಗಿಮಿಕ್ ಮಾಡಿದರೆ..ಕಿವಿಯ ಮೇಲೆ ಹೂವಿಡಿಸಿಕೊಂಡು ಕುರಿಯಾಗಲು ನಾವು ಹೆಬ್ಬೆಟ್ಟಿಗರಲ್ಲಾ..ನಾವು ಉತ್ತರ ಕನ್ನಡದ ಪ್ರಜ್ಞಾವಂತ ಹಿಂದುಗಳು… ಸಹನೆಗೂ ಸೈ, ಸಮರಕ್ಕೂ ಸೈ..ಎಂಬುದಾಗಿ ಗೋಕರ್ಣದಲ್ಲಿ ಹೋರಾಟ ಕಾವು ಪಡೆದುಕೊಂಡಿತ್ತು. ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆಯವರು ಈ ಸಂದರ್ಭದಲ್ಲಿ ಹಾಜರಿದ್ದರು.ನಾಗರಾಜ ನಾಯಕ ಅವರ ಜೊತೆಗೆ ಗಾಯತ್ರಿ ಗೌಡ ,ವೆಂಕಟರಮಣ ಕೌರಿ,ಚಂದ್ರಕಾಂತ ಶೆಟ್ಟಿ, ಮಂಜುನಾಥ ಜೆನ್ನು,ಅರುಣ ಕೌರಿ,ದಯಾನಂದ ನಾಯ್ಕ, ಶ್ರೀನಿವಾಸ ನಾಯ್ಕ, ವಸಂತ ಶೆಟ್ಟಿ ಇನ್ನಿತರರು ಹಾಜರಿದ್ದರು.

RELATED ARTICLES  ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು "ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ" ಕಾರ್ಯಕ್ರಮ.

ankola

ಅಂಕೋಲಾದಲ್ಲಿಯೂ ಪ್ರತಿಭಟನೆ ಜೋರಾಗಿ ನಡೆದ ಬಗ್ಗೆ ವರದಿಯಾಗಿದೆ. ಸ್ವಯಂ ಪ್ರೇರಿತ ಬಂದ್ ಘೋಷಣೆಯಾಗಿತ್ತು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಪಾದಯಾತ್ರೆ ಕೈಗೊಂಡು ಘಟನೆ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಬಿಜೆಪಿಗರು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

RELATED ARTICLES  ಕುಮಟಾ ಕಾಂಕ್ರೀಟ್ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು.

hliyal

ಬಲಿಪಶುವಾಗಿ ಬಲಿಯಾದವನು ಪರೇಶನಲ್ಲ.ಉತ್ತರ ಕನ್ನಡದ ಪ್ರತಿಯೊಬ್ಬರ ನಂಬಿಕೆ. ಮುಗ್ಧನ ಬಲಿಗೆ ಸಿಗಲೇ ಬೇಕು ನ್ಯಾಯ…ಅನ್ಯಾಯವಾಗಿ ಒಬ್ಬ ಯುವಕನನನ್ನು ಕೊಂದಂತ ಮುಸ್ಲಿಂ ಸಮುದಾಯದ ಅಪರಾಧಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಪರೇಶನ ಹೆತ್ತವರಿಗೆ ನ್ಯಾಯ ಸಿಗಲೇಬೇಕೆಂಬ ಹಕ್ಕೊತ್ತಾಯದೊಂದಿಗೆ ಹಳಿಯಾಳದಲ್ಲಿಯೂ ಪ್ರತಿಭಟನೆ ಕಾವು ಪಡೆದುಕೊಂಡಿತ್ತು.

karwar

ಕಾರವಾರದಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿತ್ತು ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ನಾಯಕ, ರೂಪಾಲಿ ನಾಯ್ಕ, ಮನೋಜ್ ಭಟ್, ಬಿ.ಜಿ.ಮೋಹನ್, ರಾಜೇಶ ನಾಯಕ, ಗಂಗಾಧರ ಭಟ್ ಇದ್ದರು.