ಶಿರಸಿ : ಹೊನ್ನಾವರದಲ್ಲಿ ನಡೆದ ಕೋಮುಗಲಭೆಯಲ್ಲಿ ಹಿಂದೂ ಕಾರ್ಯಕರ್ತ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಶನಿವಾರ ಇಲ್ಲಿನ ಹಳೆ ಬಸ್ ನಿಲ್ದಾಣ ವೃತ್ತದ ಬಳಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ” ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರದಲ್ಲಿ ಅಪರಾಧಿಗಳಿಗೆ ಪ್ರೋತ್ಸಾಹ ನೀಡಿತ್ತಿದೆ. ಸಹಬಾಳ್ವೆ ನಡೆಸುವರಿಗೆ ಇಲ್ಲಿ ಅವಕಾಶವಿಲ್ಲ. ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ‌. ಅದರಂತೇ ಹೊನ್ನಾವರದಲ್ಲಿ ನಡೆದಿರುವ ಪರೇಶ್ ಮೇಸ್ತ ಹತ್ಯೆಯ ಕುರಿತು ಸರಿಯಾದ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕು ” ಎಂದು ಆಗ್ರಹಿಸಿದರು.

RELATED ARTICLES  ವಾಕಿಂಗ್ ಗೆ ತೆರಳಿದ ನೌಕಾಸೇನೆ ಸಿಬ್ಬಂದಿ ಸಮುದ್ರದ ಅಲೆಗೆ ಸಿಲುಕಿ ಸಾವು.

ಹಿಂದೂ ಸಂಘಟನೆ ಪ್ರಮುಖ ಗೋಪಾಲ ದೇವಡಿಗೆ ಮಾತನಾಡಿ ಕುರಿಗಳಂತೆ ಹಿಂದೂಗಳು ತಲೆ ಕೊಡುವ ಪರಿಸ್ಥಿತಿ ಬಂದಿದೆ. ಮೊನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲೆಗೆ ಕಾಲಿಟ್ಟದ್ದು ಹಿಂದೂ ಹತ್ಯೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಇವರು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ. ಹೊನ್ನಾವರದ ಹತ್ಯೆಯನ್ನು ಸೇರಿಸಿ ಎಲ್ಲಾ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ನಾವು ಶಾಂತಿ ಪ್ರಿಯರು. ಆದರೆ ತಲವಾರು ಹಿಡಿದು ನಾವೂ ರೋಡಿಗೆ ಬಂದರೆ ಏನಾಗುತ್ತದೆ ಎಂಬುದನ್ನು ಅವರು ಯೋಚಿಸಬೇಕು ಎಂದು ಎಚ್ಚರಿಕೆ ನೀಡಿದರು.

RELATED ARTICLES  ನೆನಪಿನ ಚೌಕಟ್ಟಿನಲ್ಲಿ ಸೇರಿ ಹೋದ ಚೌಪದಿ ಸರದಾರ ವಿಡಂಬಾರಿ ಸರ್.

ಬಜರಂಗದಳ ಪ್ರಮುಖ ವಿಠ್ಠಲ ಪೈ ಮಾತನಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಉಗ್ರ ಸಂಘಟನೆಗಳ ಮೇಲಿರುವ ಕೇಸ್ ಗಳನ್ನು ಹಿಂಪಡೆದರಯ. ಕರ್ನಾಟಕದಲ್ಲಿ ಹಿಂದೂಗಳಿಗೆ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಹಿಂದೂ ಸಮಾಜದವರು ರಸ್ತೆಗಿಳಿದರೆ ಅಲ್ಪಸಂಖ್ಯಾತರು ಊರು ಬಿಡಬೇಕಾಗುತ್ತದೆ ಎಂದರು. ‌