ಶಿರಸಿ (ಉತ್ತರಕನ್ನಡ): ನಗರಸಭೆ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಧಾರವಾಡ ವಿಭಾಗೀಯ ಪೀಠ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ‌ಶಿರಸಿ ನಗರಸಭೆ ಅಧ್ಯಕ್ಷರಾಗಿ ಈ ಹಿಂದಿನ ಅಧ್ಯಕ್ಷರಾಗಿದ್ದ ಪ್ರದೀಪ ಶೆಟ್ಟಿ ಅವರೇ ಪುನಃ ಅಧಿಕಾರವನ್ನು ವಹಿಸಿಕೊಂಡರು.

ಕಳೆದ ಏಳು ತಿಂಗಳಿನಿಂದ ಆಡಳಿತ ವ್ಯವಸ್ಥೆಯಿಂದ ಹೊರಗಿದ್ದ ಅವರು ವಿಶೇಷ ಪೂಜೆಯೊಂದಿಗೆ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡರು.

RELATED ARTICLES  ಶ್ರೀ ಕ್ಷೇತ್ರ ಯಾಣದ ಸ್ವಚ್ಛತಾ ಅಭಿಯಾನ ಯಶಸ್ವಿ

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಏಳು ತಿಂಗಳಲ್ಲಿ ನಗರಸಭೆ ಆಡಳಿತ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಇಲ್ಲಿ ನಡೆಯುತ್ತಿರುವ ಬೇರೆ ಬೇರೆ ವ್ಯವಹಾರಗಳಿಗೆ ಕಡಿವಾಣ ಹಾಕಬೇಕಿದೆ. ಇರುವ ಅಲ್ಪಾವಧಿಯಲ್ಲಿಯೇ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ ಹಾಗೂ ಜಾತ್ರಾ ವಿಶೇಷ ಅನುದಾನಕ್ಕಾಗಿ ಸಿಎಂ ಅವರನ್ನು ಸಂಪರ್ಕಿಸಬೇಲಾಕಿದೆ ಎಂದು ಹೇಳಿದರು.

RELATED ARTICLES  ಚದುರಂಗ ಕ್ಷೇತ್ರದ ವಿಶೇಷ ಪ್ರತಿಭೆ, ಹೊನ್ನಾವರದ ಸಮರ್ಥನಿಗೆ ಪ್ರತಿಭಾ ಪುರಸ್ಕಾರ.

ಪಟಾಕಿ ಸಿಡಿಸಿ ಸಂಭ್ರಮಾಚರಣೆ :

ಪ್ರದೀಪ ಶೆಟ್ಟಿ ಪುನಃ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಅವರ ಬೆಂಬಲಿಗರು ನಗರಸಭೆ ಎದುರೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಶ್ರೀಧರ ಮೊಗೇರ, ಪ್ರಾನ್ಸಿಸ್ ನೊರಾನ್ಹೋ, ರಜಿಯಾ ಬಾನು, ಸುಧಾಕರ ಶೆಟ್ಟಿ, ಅರುಣ್ ಕೊಡ್ಕಣಿ, ಅರುಣ್ ಪ್ರಭು ಹಾಗೂ ಪೌರಾಯುಕ್ತ ಮಹೇಂದ್ರ ಕುಮಾರ ಉಪಸ್ಥಿತರಿದ್ದರು.