ಮೂಡಲಗಿ: ಕಳೆದ 13 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಸಮಾಜದ ಸುಧಾರಣೆಯಲ್ಲಿ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಸುಣಧೋಳಿ ಗ್ರಾಮದ ಜಡಿಸಿದ್ಧೇಶ್ವರ ಮಠದಲ್ಲಿ ಶನಿವಾರ ಸಂಜೆ ಬಿ.ವಿ. ನರಗುಂದ ಸರಕಾರಿ ಪ್ರೌಢ ಶಾಲೆ ಹಾಗೂ ದಾರವಾಡದ ವರದಶ್ರೀ ಫೌಂಡೇಷನ್ ಸಯುಂಕ್ತಾಶ್ರಯದಲ್ಲಿ ಜರುಗಿದ ಎಸ್.ಎಸ್.ಎಲ್.ಸಿಯ ಇಂಗ್ಲೀಷ ಭಾಷೆಯ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇ ಬೇಕಾದ ಅನಿವಾರ್ಯತೆ ಇದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿರುವದು ಹೆಮ್ಮೆಯ ವಿಷಯ. ಪ್ರಸಕ್ತ ಸಾಲಿನಲ್ಲಿಯೂ ಮೂಡಲಗಿ ವಲಯ ಪ್ರಥಮ ಸ್ಥಾನದ ಜೊತೆ ಪ್ರಥಮ ಪ್ರಾಶಸ್ತ್ಯದೊಂದಿಗೆ ಅತೀ ಹೆಚ್ಚು ಅಂಕಗಳನ್ನು ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲಾ ದುರಸ್ಥಿಗೆ ಅಗತ್ಯ ಕ್ರಮ: ಕ್ಷೇತ್ರದ ಕೆಲವೆಡೆ ಶಾಲಾ ಕೊಠಡಿಗಳು ಶಿಥೀಲಾವಸ್ಥೆಯಲ್ಲಿದ್ದು ಅವುಗಳ ದುರಸ್ಥಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವದು. ಇಗಾಗಲೇ ಸರಕಾರಕ್ಕೆ ಶಾಲಾ ಕೊಠಡಿಗಳ ದುರಸ್ಥಿಗೆ 10 ಕೋ.ರೂಗಳ ಪ್ರಸ್ತಾವಣೆಯನ್ನು ಸಲ್ಲಿಸಲಾಗಿದೆ. ಆದರೆ ಸರಕಾರ ಇಷ್ಟೊಂದು ಹಣವನ್ನು ನೀಡಲಿಕ್ಕೆ ಮೀನ ಮೇಷ ಎನಿಸುತ್ತಿರುವದರಿಂದ ಶಿಕ್ಷಣ ಪ್ರೇಮಿಗಳಿಂದ ಹಣ ಸಂಗ್ರಹಿಸಿ ಅಗತ್ಯವಿರುವ ಶಾಲೆಗಳ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುವದು ಎಂದು ಹೇಳಿದರು.

RELATED ARTICLES  ರೈತ ಬರೆದ ಟ್ವೀಟ್ ವೈರಲ್ ಆಯ್ತು: ಪ್ರಧಾನಿಗೂ ತಲುಪಿದ ರೈತರ ಈರುಳ್ಳಿ ಸಂಕಷ್ಟ.

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶಿವಾನಂದ ಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೈಕ್ಷಣಿಕ ರಂಗದ ಅಭ್ಯೂದಯಕ್ಕೆ ಶ್ರಮಿಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ. ಶಾಸಕರ ಜನಪರ ಕಾಳಜಿ ಎಷ್ಟು ಹೊಗಳಿದರು ಸಾಲದು. ಇಂತಹ ಹೃದಯ ವೈಶಾಲ್ಯದ ಶಾಸಕರನ್ನು ಅರಭಾಂವಿ ಕ್ಷೇತ್ರ ಪಡೆದಿರುವದು ಜನರ ಪುಣ್ಯವೆಂದು ಶ್ಲಾಘಿಸಿದರು. ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸುವಲ್ಲಿಯೂ ಇವರ ರೈತಪರ ಕಾಳಜಿಯನ್ನು ಮೆಚ್ಚುವಂತಹದು. ಸ್ವತಃ ತಾವೇ ಕಾಲುವೆಗೆ ಭೇಟ್ಟಿ ನೀಡಿ ರೈತರ ಜಮೀನುಗಳಿಗೆ ಅದರಲ್ಲು ಕುಲಿಗೋಡ ವಿತರಣಾ ಕಾಲುವೆಯ ಸುಣಧೋಳಿ, ಹೊನಕುಪ್ಪಿ, ಹೊಸಟ್ಟಿ, ಸಿದ್ದಾಪೂರಹಟ್ಟಿ, ಲಕ್ಷ್ಮೇಶ್ವರ, ಕುಲಿಗೋಡ, ಬೈರನಟ್ಟಿ ಗ್ರಾಮಗಳ ಟೇಲ್ ಎಂಡ್ ರೈತರ ಜಮೀನುಗಳಿಗೆ ನೀರು ಮುಟ್ಟಿಸುವಲ್ಲಿಯೂ ಅವರ ಕಾರ್ಯ ಪ್ರಶಂಸನೀಯವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಹಾಗೂ ರೈತ ಪರ ಸೇವೆಯನ್ನು ಮುಕ್ತ ಕಂಠದಿಂದ ಕೊಂಡಾಡಿದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 02-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಾಯೋಜಕತ್ವದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸರಳ ಗಣಿತ, ಸುಲಭ ಗಣಿತ ಕ್ಯಾಲೆಂಡರಗಳನ್ನು ಶ್ರೀಗಳು ಬಿಡುಗಡೆ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರ್ಗಿಯ ಖ್ಯಾತ ರಾಜ್ಯ ಮಟ್ಟದ ಆಂಗ್ಲ ಭಾಷಾ ಸಂಪನ್ಮೂಲ ವ್ಯಕ್ತಿ ಶಾಂತಿ ದೇಸಾಯಿ ಅವರು ವಿದ್ಯಾರ್ಥಿಗಳಿಗೆ ಇಂಗ್ಲೀಷ ಭಾಷೆಯಲ್ಲಿರು ಕ್ಲೀಷ್ಠಾಂಶಗಳು ಹಾಗೂ ಕಲಿಕೆಯನ್ನು ಫಲಪ್ರದಗೊಳಿಸುವ ನಿಟ್ಟಿನಲ್ಲಿ ಕೈಗೋಳ್ಳುವ ಕ್ರಮಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸುಣಧೋಳಿ ಗ್ರಾ.ಪಂ ಅಧ್ಯಕ್ಷ ಭೀಮಸಿ ಹೂವಣ್ಣವರ, ವರದಶ್ರೀ ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ, ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಮಣ್ಣಾ ಬೆಣ್ಣಿ, ಶಿವಲಿಂಗಪ್ಪ ಮದಬಾಂವಿ, ಗುರುರಾಜ ಪಾಟೀಲ, ಮುರಿಗೇಪ್ಪ ಪಾಟೀಲ, ರಾಜು ವಾಲಿ, ಭೀಮಶಿ ಕಮತಿ, ಕಲ್ಲಪ್ಪ ಕಮತಿ, ಗ್ರಾ.ಪಂ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಇಂದಿನ ಕಾರ್ಯಾಗಾರದಲ್ಲಿ 14 ಪ್ರೌಢ ಶಾಲೆಗಳಿಂದ ಸುಮಾರು 1200 ವಿಧ್ಯಾರ್ಥಿಗಳು ಭಾಗಿಯಾಗಿದ್ದರು.