ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ರವಿ ಬೆಳಗೆರೆಯನ್ನು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ.
ನಿನ್ನೆ ಸಿಸಿಬಿ ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ರವಿಯನ್ನು 4 ದಿನ ಸಿಸಿಬಿ ವಶಕ್ಕೆ ಪಡೆಯಲಾಗಿತ್ತು. ರಾತ್ರಿ ವಿಶ್ರಾಂತಿ ಪಡೆದಿದ್ದ ರವಿಯನ್ನು ಇಂದು ಬೆಳಗ್ಗಿನಿಂದಲೇ ವಿಚಾರಣೆ ನಡೆಸಲಾಯಿತು.
ನಿನ್ನೆಯಿಂದಲೂ ಪೊಲೀಸರ ವಶದಲ್ಲಿರುವ ರವಿ ಬೆಳಗೆರೆ ಅವರಿಗೆ ಸಿಗರೇಟ್‌ನ ಅಭಾವ ಉಂಟಾಗಿದೆ. ರವಿಗೆ ಸಿಗರೇಟ್ ನೀಡುವುದೇ ಸಿಸಿಬಿ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ರವಿ ಬೆಳಗೆರೆ ಅರ್ಧಗಂಟೆಗೊಮ್ಮೆ ಸಿಗರೇಟ್‌ನ ಬೇಡಿಕೆ ಇಡುತ್ತಿದ್ದು, ಇದರಿಂದ ತನಿಖೆ ಸಹ ಮಂದಗತಿಯಲ್ಲಿ ಸಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನು ತನಿಖೆ ವೇಳೆ ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂದಷ್ಟೇ ರವಿ ಬೆಳಗೆರೆ ಹೇಳುತ್ತಿದ್ದಾರೆ. ಅಲ್ಲದೆ ನಾನು ಹೆಗ್ಗರವಳ್ಳಿಯ ಎಲ್ಲಾ ತಪ್ಪುಗಳನ್ನು ಆಗಲೇ ಕ್ಷಮಿಸಿದ್ದೇನೆ. ನಾನೇಕೆ ಸುಪಾರಿ ಕೊಡಲಿ ಎಂದು ಅಧಿಕಾರಿಗಳಿಗೇ ಮರುಪ್ರಶ್ನೆ ಮಾಡುತ್ತಿದ್ದಾರೆ.