? ಶ್ರೀ ರಾಮಚಂದ್ರಾಪುರ ಮಠ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ವಲಯೋತ್ಸವ ,ಮಹಾಸಭೆ ಹಾಗೂ ಮಾಸಿಕ ಸಭೆಯು ದಿನಾಂಕ 10/12/2017 ಭಾನುವಾರ ಕಾಸರಗೋಡು ಹವ್ಯಕ ಸಭಾ ಭವನದಲ್ಲಿ ಜರುಗಿತು.
?ಬೆಳಿಗ್ಗೆ 8.30 ಘಂಟೆಗೆ ಧ್ವಜಾರೋಹಣ,ಶಂಖ ನಾದ,ಗುರುವಂದನೆ,ಗಣಪತಿ ಹವನದೊಂದಿಗೆ ಕಾರ್ಯಕ್ರಮ ಪ್ರಾರಂಭ ವಾಯಿತು.
?ಬಳಿಕ ಘಂಟೆ 9.30 ರಿಂದ ವಲಯದ ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಭಜನೆ ನಡೆಯಿತು.
?ಸಭಾ ಕಾರ್ಯಕ್ರಮದಲ್ಲಿ ಘಂಟೆ 11.00ಕ್ಕೆ ಮಂಡಲಾಧ್ಯಕ್ಷ ಪ್ರೊ.ಶ್ರೀ ಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ವಲಯ ಅಧ್ಯಕ್ಷ ಶ್ರೀ ಯೇತಡ್ಕ ರಮೇಶ ಭಟ್ ಸ್ವಾಗತ ನೀಡಿದರು. ವಲಯ ಕಾರ್ಯದರ್ಶಿ ಉಳುವಾನ ಈಶ್ವರ ಭಟ್ಟರು ಗೋಚಾತುರ್ಮಾಸ್ಯದಿಂದ ಅಭಯಚಾತುರ್ಮಾಸ್ಯದ ವರೆಗಿನ ವಿಭಾಗಾವಾರು ವರದಿಯನ್ನು ಮಂಡಿಸಿದರು.ಬಳಿಕ ಗತ ಮಾಸಿಕ ವರದಿಯನ್ನಿತ್ತರು.
? ದಿಕ್ಸೂಚಿ ಭಾಷಣ ಮಾಡಿದ ಮಹಾಮಂಡಲ ಪುರಾಲೇಖ ವಿಭಾಗ ಪ್ರಧಾನ ಶ್ರೀಯುತ ಉಂಡೆಮನೆ ವಿಶ್ವೇಶ್ವರ ಭಟ್ ಅವರು ” ಮಠ ಮತ್ತು ನಾವು ” ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸುವ್ಯವಸ್ಥಿತ , ಸಂಸ್ಕಾರಯುತ ಕುಟುಂಬ ಹಾಗೂ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯನ್ನು ಮನಮುಟ್ಟುವಂತೆ ವಿಶ್ಲೇಷಿಸಿದರು.ಅಸ್ತಿತ್ವ ಅಲುಗಾಡುತ್ತಿದ್ದ ನಮ್ಮ ಸಮಾಜವನ್ನು ಸುಧೃಢ ನೆಲೆಗೆ ತಲುಪಿಸುವ ಹಾಗೂ ತಲುಪಿಸುತ್ತಿರುವ ಗುರುಗಳ ದಿವ್ಯ ಶಕ್ತಿಯನ್ನು ಸ್ಮರಿಸಿದರು.
?ಬಳಿಕ ಹಿರಿಯ ಗುರಿಕ್ಕಾರರುಗಳಾದ ಅಳಕ್ಕೆ ಮಹಾಲಿಂಗ ಭಟ್ ಕಕ್ಕೆಪಾಡಿ,ಮಧೂರು ಹಾಗೂ ಸುಬ್ರಾಯ ಭಟ್ ಪೂನೂರು ಇವರನ್ನು ಸನ್ಮಾನಿಸಲಾಯಿತು.
?ಮಂಡಲ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಸರ್ಪಮಲೆ ಅವರು ಸಮಯೋಚಿತ ಮಾರ್ಗದರ್ಶನ ಹಾಗೂ ಸೂಕ್ತ ಸಲಹೆಗಳನ್ನು ಇತ್ತರು.ದಿನಾಂಕ 24/12/17ರಂದು ಬದಿಯಡ್ಕ ವಿದ್ಯಾಪೀಠದಲ್ಲಿ ನಡೆಯುವ ವಿಭಾಗಾವಾರು ಸಭೆಯಲ್ಲಿ ವಲಯದ ಪದಾಧಿಕಾರಿಗಳು ಹಾಗೂ ಗುರಿಕ್ಕಾರರುಗಳು ಭಾಗವಹಿಸುವಂತೆ ಕೇಳಿಕೊಂಡರು. ಗುರಿಕ್ಕಾರರುಗಳು ಮನೆ ಹಣಸಂಗ್ರಹ ಕಾರ್ಯವನ್ನು ಜನವರಿ 15ರಿಂದ 31ರ ಒಳಗೆ ಮುಗಿಸುವಂತೆಯೂ ಸೂಚನೆ ನೀಡಿದರು.ಲಕ್ಷ್ಮೀಲಕ್ಷಣದ ಗಣಕೀಕರಣ ವನ್ನು ಪೂರ್ತಿಗೊಳಿಸುವಂತೆ ತಿಳಿಸಿದರು.
? ಮಂಡಲ ಸಂಸ್ಕಾರ ವಿಭಾಗ ಪ್ರಧಾನ ಶ್ರೀ ನವನೀತಪ್ರಿಯ ಕೈಪಂಗಳ ಅವರು ದೈನಂದಿನ ಧಾರ್ಮಿಕ ಅನುಷ್ಠಾನಗಳನ್ನು ಕೈಗೊಳ್ಳುವಂತೆ ತಿಳಿಸುತ್ತಾ,ಪೂಜ್ಯ ಶ್ರೀ ಸಂಸ್ಥಾನದವರಿಂದ ಲೋಕಕಲ್ಯಾಣಾರ್ಥವಾಗಿ ಮಾಡಲಾದೇಶಿಸಿರುವ ಮಂಡಲಕ್ಕೆ 24 ಲಕ್ಷ ಗಾಯತ್ರಿ ಮಂತ್ರ ಜಪಸಂಖ್ಯೆಯನ್ನು ಮುಂದಿನ ಚಾತುರ್ಮಾಸ್ಯದೊಳಗಾಗಿ ಪೂರ್ತಿಕರಿಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗುವಂತೆ ಸಲಹೆಯಿತ್ತರು. ಮಂಡಲ ಮಾತೃವಿಭಾಗ ಪ್ರಧಾನೆ ಶ್ರೀಮತಿ ಕುಸುಮಾ ಪೆರ್ಮುಖ ಅವರು ಮಾತೆಯರ ಜವಾಬ್ದಾರಿ ಹಾಗೂ ಮಂಡಲ ಬಿಂದು ಸಿಂಧು ವಿಭಾಗ ಪ್ರಧಾನೆ ಶ್ರೀಮತಿ ದೇವಕಿ ಪನ್ನೆ ಅವರು ಬಿಂದು ಸಿಂಧುವಿನ ಮಹತ್ವದ ಬಗೆಗೆ ತಿಳಿಸಿದರು.
?ಅಧ್ಯಕ್ಷ ಭಾಷಣ ದಲ್ಲಿ ಶ್ರೀಕೃಷ್ಣ ಭಟ್ ಅವರು ವಲಯೋತ್ಸವವನ್ನು ಆಚರಿಸುತ್ತಿರುವ ಕಾಸರಗೋಡು ವಲಯವನ್ನು ಪ್ರಶಂಸಿಸುತ್ತಾ ,ಇನ್ನೂ ಹೆಚ್ಚು ಕ್ರಿಯಾಶೀಲರಾಗುವಂತೆ ಹಾಗೂ ಗುರುಗಳು ,ಮಠಕ್ಕೆ ಎಂದಿಗೂ ವಿಶ್ವಾಸಿಗಳಾಗಿರುವಂತೆ ಕರೆ ಕೊಟ್ಟರು.
?ಮಂಡಲ ವೃತ್ತಿ ನಿರತ ಪ್ರಧಾನ ಶ್ರೀ ಯೇತಡ್ಕ ಗೋವಿಂದ ಭಟ್ ಹಾಗೂ ಮಂಡಲ ವಿದ್ಯಾ ವಿಭಾಗ ಪ್ರಧಾನ ಶ್ರೀ ಎಡಕ್ಕಾನ ಕೇಶವ ಪ್ರಸಾದ ಇವರು ಉಪಸ್ಥಿತರಿದ್ದರು .
? ವಲಯ ಬಿಂದು ಸಿಂಧು ವಿಭಾಗ ಪ್ರಧಾನೆ ಶ್ರೀಮತಿ ಪ್ರೇಮಲತಾ ಯಂ ಶರ್ಮ ಅವರು ಧನ್ಯವಾದ ಸಮರ್ಪಣೆಗೈದರು.
?ಅಪರಾಹ್ನ ಭೋಜನದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈದ್ಯ ಶ್ರೀ ಜಯದೇವ ಕಂಗಿಲರ ಪುತ್ರ ಕುಮಾರ ಧನ್ವಿ ಇವರಿಂದ ಸುಶ್ರಾವ್ಯ ಕೀಬೋರ್ಡ್ ವಾದನ, ಮಕ್ಕಳು ಹಾಗೂ ಮಹಿಳೆಯರಿಂದ ಹಾಡುಗಾರಿಕೆ, ಶ್ರೀಮತಿ ಪ್ರೇಮಲತಾ ಮನ್ನಿಪ್ಪಾಡಿ ಅವರಿಂದ ಕಸದಿಂದ- ರಸ ಪ್ರಾತ್ಯಕ್ಷಿಕೆ ಹಾಗೂ ಶ್ರೀಮತಿ ಜಯಶ್ರೀ ನಾಗರಾಜ್ ನೇತೃತ್ವದಲ್ಲಿ ಅಂತ್ಯಾಕ್ಷರಿ ಸ್ಪರ್ಧೆ ಜರಗಿತು.
? ಕೊನೆಯಲ್ಲಿ ಶಾಂತಿ ಮಂತ್ರ ,ಶಂಖ ನಾದ,ಧ್ವಜಾವತರಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

RELATED ARTICLES  ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪ್ರಯಾಣಿಸುವುದನ್ನು ನಿರ್ಬಂಧಿಸಲು ಮುಂದಾಗಿದೆ ಸರ್ಕಾರ!

ವರದಿ: ಈಶ್ವರ ಭಟ್ ಕಿಳಿಂಗಾರು ಶಿಷ್ಯ ಮಾಧ್ಯಮ ಕಾಸರಗೋಡು ವಲಯ.