ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಸಿಸಿಬಿ ಅಧಿಕಾರಿಗಳ ಕಸ್ಟಡಿಯಲ್ಲಿರುವಾಗಲೇ ಸಂತ್ರಸ್ಥ ಸುನಿಲ್ ಹೆಗ್ಗರವಳ್ಳಿ ಅವರಿಗೆ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ಸುನಿಲ್ ಹೆಗ್ಗರವಳ್ಳಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ ಬೆಳಗ್ಗೆ ಸುಮಾರು 9.30ರ ಸುಮಾರಿನಲ್ಲಿ ರವಿ ಬೆಳಗೆರೆ ತಮ್ಮ ಆಪ್ತರೊಬ್ಬರ ಸಹಾಯದಿಂದ ನನಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಯಶೋಮತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಹೇಳಿಕೆ ನೀಡಿದ್ದೀಯಾ ಎಂದು ಪ್ರಶ್ನಿಸಿದರು. ಇದಕ್ಕೆ ನಾನು ಇಲ್ಲ ಎಂದು ಹೇಳಿದ್ದೆ. ಕೂಡಲೇ ಕರೆ ಕಟ್ ಮಾಡಿದರು ಎಂದು ಹೇಳಿದ್ದಾರೆ.

RELATED ARTICLES  ಮತ್ತೆ ಪ್ರಾರಂಭವಾದ ಕ್ವಾರಂಟೈನ್‌ ರೂಲ್..!

ಅಂತೆಯೇ ಕಸ್ಟಡಿಯಲ್ಲಿರುವ ವ್ಯಕ್ತಿ ಕರೆ ಮಾಡಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವುದು ಪೊಲೀಸರ ಕಾರ್ಯದ ಮೇಲೆ ಶಂಕೆ ಮೂಡಿಸಿದೆ ಎಂದು ಹೆಗ್ಗರವಳ್ಳಿ ಅಳಲು ತೋಡಿಕೊಂಡಿದ್ದಾರೆ.

RELATED ARTICLES  ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಇಂದು 111ನೇ ಜನ್ಮ ದಿನ:ಶ್ರೀಗಳ ದಿನಚರಿ ಹೇಗಿರುತ್ತೆ ಗೊತ್ತಾ?